ಬೆಳ್ತಂಗಡಿ, ಆ. 24 (DaijiworldNews/MB) : ಸೋಮವಾರ ಮುಂಜಾನೆ, ವಾಕಿಂಗ್ ಹೋಗುತ್ತಿದ್ದ ತಂದೆಯ ಮೇಲೆ ಹೊಂಚು ಹಾಕಿ ಕುಳಿತಿದ್ದ ಪುತ್ರ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಬೆಚ್ಚಿ ಬೀಸುವ ಘಟನೆ ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನ ರಸ್ತೆಯಲ್ಲಿ ನಡೆದಿದ್ದು ದಾಳಿಗೊಳಗಾದ ಸ್ಥಳೀಯ ನಿವಾಸಿ ವಾಸು ಸಪಲ್ಯ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆರೋಪಿ ದಯಾನಂದ


ಆರೋಪಿ ಪುತ್ರ ದಯಾನಂದ ನಡೆಸಿದ ಮಾರಾಕಾಸ್ತ್ರ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ ವಾಸು ಸಪಲ್ಯ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಕೆಲವು ವಿಷಯಗಳಲ್ಲಿ ತಂದೆ ಮತ್ತು ಪುತ್ರನ ನಡುವೆ ಕೆಲವು ಸಮಯದಿಂದ ವೈಮನಸ್ಸು ಇದ್ದು ಈ ದಾಳಿ ನಡೆಸಲು ಇದು ಕಾರಣ ಎಂದು ಹೇಳಲಾಗಿದೆ.
ವೃತ್ತಿಯಲ್ಲಿ ವಾಸು ಸಪಲ್ಯ ಅವರು ಕಾರು ಚಾಲಕರಾಗಿದ್ದರು. ಮೃತರು ಮೂವರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.