ಕಾರ್ಕಳ, ಆ 24 (DaijiworldNews/MSP): ಕೊರೊನಾ ವೈರಸ್ನಿಂದಾಗಿ ಇಡೀ ದೇಶದಲ್ಲಿ ಮಾರ್ಚ್ನಿಂದ ಲಾಕ್ಡೌನ್ ಅಳವಡಿಸಿರುವುದರಿಂದ ಆರ್ಥಿಕವಾಗಿ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿರುವುದರಿಂದ ಬ್ಯಾಂಕ್ ಶುಲ್ಕ ಹಾಗೂ ಇ.ಎಂ.ಐ ಗಳನ್ನು ಡಿಸೆಂಬರ್ ಅಂತ್ಯದವರೆಗೆ ತಡೆಹಿಡಿಯುವಂತೆ ಮಾನ್ಯ ಕೇಂದ್ರ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೆ ಕಾರ್ಕಳ ಶಾಸಕರು ಹಾಗೂ ಸರಕಾರಿ ಮುಖ್ಯ ಸಚೇತಕರಾದ ವಿ. ಸುನಿಲ್ ಕುಮಾರ್ ರವರು ಲಿಖಿತವಾಗಿ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರಕಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಬ್ಯಾಂಕ್ ಶುಲ್ಕ ಹಾಗೂ ಇ.ಎಂ.ಐಗಳನ್ನು ಅಗಸ್ಟ್ ಅಂತ್ಯದವರಗೆ ತಡೆಹಿಡಿಯುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಈಗಾಗಲೇ ಆದೇಶಿಸಿದ್ದಾರೆ.
ಬಡ ಜನರು ಇನ್ನೂ ಆರ್ಥಿಕವಾಗಿ ಚೇತರಿಸಿಕೊಳ್ಳಬೇಕಾಗಿದ್ದು ಕೆಲವು ಕೈಗಾರಿಕೆಗಳು ಹಾಗೂ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಆರಂಬಿಸಿರುವುದಿಲ್ಲ. ಈ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಂಕ್ ಶುಲ್ಕ ಹಾಗೂ ಇ.ಎಂ.ಐ ಗಳನ್ನು ಡಿಸೆಂಬರ್ ಅಂತ್ಯದವರೆಗೆ ತಡೆಹಿಡಿಯುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.