ಉಡುಪಿ, ಆ. 24(DaijiworldNews/HR): ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ 26 ವರ್ಷದ ರಕ್ಷಾ ನಿಧನ ಹೊಂದಿದ ನಂತರ ಹಲವಾರು ಆತಂಕಗಳು ಎದಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ, ರಾಜ್ಯ ಗೃಹ ಸಚಿವರು, ಆರೋಗ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೋ ಸಮಾವೇಶ ನಡೆಸಿ ರಕ್ಷಾ ಅವರ ದೇಹ ಮತ್ತು ಪ್ರಕರಣವನ್ನು ಹಸ್ತಾಂತರಿಸುವ ಬಗ್ಗೆ ಚರ್ಚಿಸಲಾಯಿತು. ಸರ್ಕಾರದ ಆದೇಶದಂತೆ ಈ ಪ್ರಕರಣವನ್ನು ಸಿಒಡಿ ಗೆ ಹಸ್ತಾಂತರಿಸಲಾಗುತ್ತಿದೆ. ಏತನ್ಮಧ್ಯೆ, ಈ ವಿಷಯದಲ್ಲಿ ಐದು ದಿನಗಳಲ್ಲಿ ವಿವರವಾದ ವರದಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಸಹ ಕೋರಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಈ ಬಗ್ಗೆ ಇಂದು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಟ್, "ಪ್ರಕರಣದ ತನಿಖೆಗಾಗಿ ಏಳು ಸದಸ್ಯರ ವೈದ್ಯಕೀಯ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ತಂಡದಲ್ಲಿ ಡಾ.ಚಂದ್ರಶೇಖಾ ಅಡಿಗಾ, ಉದಯ್ ಶಂಕರ್, ರಾಮರಾವ್, ಡಾ. ಉಮೇಶ್ ಪ್ರಭು, ಡಾ.ಸ್ಮಿತಾ ಶೆಣೈ, ಎಚ್ ಓ ಡಿ ಡಾ. ನಾಗರತ್ನ ಇವರ ಸಮಿತಿಯು ಐದು ದಿನಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸಬೇಕಾಗುತ್ತದೆ ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದರು.
ಕುಟುಂಬಕ್ಕೆ ತಪ್ಪಾಗಿ ದೇಹವನ್ನು ಹಸ್ತಾಂತರಿಸಿದ ಮತ್ತೊಂದು ಪ್ರಕರಣದ ಬಗ್ಗೆ ಮಾತನಾಡಿದ ರಘುಪತಿ ಭಟ್, "ಈ ಪ್ರಮಾದಕ್ಕೆ ಆಂಬ್ಯುಲೆನ್ಸ್ ಚಾಲಕ ಮತ್ತು‘ ಡಿ ’ದರ್ಜೆಯ ಸಿಬ್ಬಂದಿ ಕಾರಣ. ಆಡಳಿತವು ಈಗಾಗಲೇ ಅವರಿಗೆ ನೋಟಿಸ್ ನೀಡಿದ್ದು, ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಇದಲ್ಲದೆ, ಶವವನ್ನು ಹಸ್ತಾಂತರಿಸುವ ಸಮಯವನ್ನು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ನಿಗದಿಪಡಿಸಲಾಗಿದೆ. ದೇಹವನ್ನು ಗುರುತಿಸಲು ಕುಟುಂಬ ಸದಸ್ಯರೊಬ್ಬರು ಅಗತ್ಯವಿದ್ದು ಜೊತೆಗೆ ಈ ಪ್ರಕ್ರಿಯೆಯಲ್ಲಿ ವೈದ್ಯಕೀಯ ಅಧಿಕಾರಿಯೊಬ್ಬರು ಹಾಜರಾಗುವಂತೆ ನಿರ್ದೇಶಿಸಲಾಗಿದೆ ಎಂದು ಶಾಸಕ ಹೇಳಿದರು.
"ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ಇಲಾಖೆಗಳ ಅಧಿಕಾರಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದಾಗ್ಯೂ, ಇಂತಹ ತಪ್ಪುಗಳು ಸ್ವೀಕಾರಾರ್ಹವಲ್ಲ ಮತ್ತು ಮತ್ತೆ ಜಿಲ್ಲೆಯಲ್ಲಿ ಪುನರಾವರ್ತನೆಯಾಗುವುದಿಲ್ಲ. ಇಂತಹ ಪ್ರಕರಣಗಳನ್ನು ಎದುರಿಸುವಾಗ ವೈದ್ಯರು ಜಾಗರೂಕರಾಗಿರಬೇಕು" ಎಂದು ಭಟ್ ಹೇಳಿದರು.