ಕಾಸರಗೋಡು, ಆ.24 (DaijiworldNews/SM): ಜಿಲ್ಲೆಯಲ್ಲಿ ಸೋಮವಾರ 118 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ 103 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಮೂರು ಮಂದಿ ವಿದೇಶ, 12 ಮಂದಿ ಹೊರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.

ನಾಲ್ಕು ಮಂದಿ ಪೊಲೀಸರು ಹಾಗೂ ನಾಲ್ವರು ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ತಗಲಿದೆ. 91 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಕಾಸರಗೋಡು ನಗರಸಭೆ 14, ಮಧೂರು, ಮಂಗಲ್ಪಾಡಿ ತಲಾ 5, ಚೆಂಗಳ, ಚೆಮ್ನಾಡ್, ಪಡನ್ನ ತಲಾ 3, ನೀಲೇಶ್ವರ ನಗರಸಭಾ ವ್ಯಾಪ್ತಿ 20, ತ್ರಿಕ್ಕರಿಪುರ, ಪಿಲಿಕ್ಕೋಡ್ ತಲಾ 8, ಚೆರ್ವತ್ತೂರು 11, ಬದಿಯಡ್ಕ, ಮೊಗ್ರಾಲ್ ಪುತ್ತೂರು, ಕಿನಾನೂರು ಕರಿಂದಲ, ಈಸ್ಟ್ ಎಳೇರಿ, ಕೊಡೋ ಬೇಳೂರು, ಕರಿವೆಳ್ಳೂರು, ಪುಲ್ಲೂರು ಪೆರಿಯ ತಲಾ 1, ಕುಂಬಳೆ, ದೇಲಂಪಾಡಿ ತಲಾ 4, ಪುತ್ತಿಗೆ, ವಳಿಯಪರಂಬ ತಲಾ ಇಬ್ಬರಿಗೆ ಸೋಂಕು ದ್ರಢಪಟ್ಟಿದೆ.
ಜಿಲ್ಲೆಯಲ್ಲಿ ಈ ತನಕ ಒಟ್ಟು 4049 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು, ಈ ಪೈಕಿ 3206 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 513 ಮಂದಿ ವಿದೇಶಗಳಿಂದ, 375 ಮಂದಿ ಹೊರ ರಾಜ್ಯಗಳಿಂದ ಬಂದವರು ಇದರಲ್ಲಿ ಒಳಗೊಂಡಿದ್ದಾರೆ. ಇಲ್ಲಿಯ ತನಕ 2980 ಮಂದಿ ಗುಣಮುಖರಾಗಿದ್ದಾರೆ. 31 ಮಂದಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿದ್ದಾರೆ. 988 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.