ಮಂಗಳೂರು, ಆ. 24 (DaijiworldNews/SM): ಸೌದಿಯ ದಮ್ಮಮ್ ನಲ್ಲಿ ಸಂಕಷ್ಟದಲ್ಲಿದ್ದವರಿಗೆ ಟ್ರೇಡಿಂಗ್ ಅಲೈಡ್ ಇಂಡಸ್ಟ್ರಿಯಲ್ ಸರ್ವಿಸ್ ಕಾರ್ಪೊರೇಷನ್ ನೆರವಾಗಿದೆ. ದಮ್ಮಮ್ ನಿಂದ ಮಂಗಳೂರಿಗೆ ಚಾರ್ಟೆಡ್ ಫ್ಲೈಟ್ ವ್ಯವಸ್ಥೆ ಮಾಡಿ ಸಂಕಷ್ಟದಲ್ಲಿದ್ದವರನ್ನು ಕರೆ ತರಲಾಗಿದೆ.

ತೌಸೀಫ್ ಅಹ್ಮದ್, ಅಮೀರ್ ಹುಸೈನ್ ಕಂಪನಿ ಮುಖ್ಯಸ್ಥರ ಸಹಕಾರ, ಫಯಾಝ್ ಮುಝೈನ್ ತಂಡ ನೇತೃತ್ವ ವಹಿಸಿಕೊಂಡು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಇರ್ಫಾನ್ ಅಬ್ದುಲ್ ಖಾದರ್ ಮತ್ತು ತಂಡದ ಇತರೆ ಸದಸ್ಯರು ಸಹಕಾರ ನೀಡಿದ್ದಾರೆ.
ಇನ್ನು ದಮ್ಮಮ್ ನಲ್ಲಿ ಸಂಕಷ್ಟದಲ್ಲಿದ್ದ ಗರ್ಭಿಣಿಯರು, ಕೆಲಸ ಕಳೆದುಕೊಂಡವರು, ರೋಗಿಗಳಿಗೆ ಆಧ್ಯತೆ ನೀಡಲಾಗಿದೆ. 175 ಪ್ರಯಾಣಿಕರು, 12 ಶಿಶುಗಳು ದಮ್ಮನ್ ನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಈ ಪೈಕಿ 38 ಗರ್ಭಿಣಿಯರು, ಇಬ್ಬರು ಕ್ಯಾನ್ಸರ್ ರೋಗಿಗಳು, ಒಬ್ಬರು ಪ್ಯಾರಲೈಸಿಸ್ ರೋಗಿ, 32 ಮಂದಿ ಮಕ್ಕಳು ಹಾಗೂ ಹಿರಿಯ ನಾಗರಿಕರು ಸೇರಿಕೊಂಡಿದ್ದಾರೆ.
ಸುರತ್ಕಲ್ ಕೃಷ್ಣಾಪುರ ಮೂಲದ 8 ಯುವಕರ ತಂಡ ಈ ಮಾನವೀಯ ಕಾರ್ಯ ಮಾಡಿದ್ದು, ದಮ್ಮಮ್ನಲ್ಲಿ ಸಂಕಷ್ಟದಲ್ಲಿ ಜನರ ನೆರವಿಗೆ ಸುರತ್ಕಲ್ ಕೃಷ್ಣಾಪುರ ಮೂಲದ ಯುವಕರು ನಿಂತಿದ್ದಾರೆ.
ಈ ಹಿಂದೆ ಪ್ರಯಾಣಿಸಲು ಅವಕಾಶ ಸಿಗದೆ ಜನರು ಸಂಕಷ್ಟದಲ್ಲಿದ್ದರು. ಸಂಕಷ್ಟದಲ್ಲಿದ್ದ ಜನರನ್ನು ಊರಿಗೆ ಮರಳಿಸುವ ಮೂಲಕ ಯುವಕರ ತಂಡ ಮಾನವೀಯತೆ ಮೆರೆದಿದ್ದಾರೆ.