ಕಾರ್ಕಳ, ಆ. 25 (DaijiworldNews/MB) : ಇಲ್ಲಿನ ಹಿರ್ಗಾನ ಗ್ರಾಮದ ಗೇರು ಬೀಜ ಫ್ಯಾಕ್ಟರಿಯೊಂದಕ್ಕೆ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.











ಫ್ಯಾಕ್ಟರಿಯೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಈ ಅಗ್ನಿ ಅವಘಡದಿಂದಾಗಿ ಕೋಟ್ಯಾಂತರ ಮೌಲ್ಯದ ಸೊತ್ತುಗಳಿಗೆ ಹಾನಿ ಉಂಟಾಗಿದ್ದು ಭಾರೀ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಬೆಂಕಿ ತಗುಲಿದ ವಿಚಾರವು ನಸುಕಿನ ಜಾವ 12.30 ರ ವೇಳೆಗೆ ಪಕ್ಕದಲ್ಲಿ ಮಲಗಿದ್ದ ಕೆಲಸಗಾರರ ಗಮನಕ್ಕೆ ಬಂದಿದ್ದು ಕೂಡಲೇ ಮಾಲಕರಿಗೆ ಮಾಹಿತಿ ನೀಡಿ ಅಗ್ನಿ ಶಾಮಕ ದಳದವರನ್ನು ಕರೆಸಲಾಗಿದೆ. ಗೇರು ಬೀಜದ ಸಿಪ್ಪೆ ಮತ್ತು ಎಣ್ಣೆ ಇರುವುದರಿಂದ ಬೆಂಕಿಯು ಪಸರಿಸುತ್ತಲೇ ಇದೆ ಎಂದು ವರದಿಯಾಗಿದೆ.
ಹಾಗೆಯೇ ಮಾಲಕ ಪ್ರಕಾಶ್ ಅವರು, ಅಗ್ನಿ ಅವಘಡದಿಂದ ಸುಮಾರು 1.5 ಕೋಟಿ ರೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಬೆಂಕಿ ನಂದಿಸುವ ಕಾರ್ಯ ನಡೆಸಲಾಗುತ್ತಿದೆ.