ಬೆಳ್ತಂಗಡಿ, ಆ. 25 (DaijiworldNews/MB) : ಕೋಮು ಪ್ರಚೋದಕ ಪೋಸ್ಟ್ ಮಾಡಿದ ಆರೋಪದಲ್ಲಿ ವ್ಯಕ್ತಿಯನ್ನು ಪೊಲೀಸರು ಆಗಸ್ಟ್ 24 ರ ಸೋಮವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಬಂಧಿತ ಆರೋಪಿಯನ್ನು ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂದು ಗುರುತಿಸಲಾಗಿದೆ.
ಪುತ್ತಿಲದ ಸಂಬಂಧಿಯೊಬ್ಬರ ನಿವಾಸದಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಅವರು ಇತರ ಪೊಲೀಸರರೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಯೋಧ್ಯೆಯಲ್ಲಿಆಗಸ್ಟ್ 5 ರಂದು ನಡೆದ ರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ರಘುರಾಮು ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಪಟಾಕಿಗಳನ್ನು ಸಿಡಿಸಿದ್ದಾರೆ ಎಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಬಳಿಕ ಅವರು ವಾಟ್ಸಾಪ್ನಲ್ಲಿ ನನಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಇನ್ನೊಂದು ಸಮುದಾಯದವರಿಗೆ ಬಾಂಬು ಹಾಕಿ ಕೊಲ್ಲಬೇಕು ಎಂಬ ಕೋಮು ಪ್ರಚೋದಕ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕರ್ಪಾಡಿ ನಿವಾಸಿ ಜಲೀಲ್ ಎಂಬವರು ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.