ಕಾಸರಗೋಡು, ಆ. 25 (DaijiworldNews/SM): ಜಿಲ್ಲೆಯಲ್ಲಿ ಮಂಗಳವಾರ 99 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 103 ಮಂದಿ ಗುಣಮುಖಗೊಂಡಿದ್ದಾರೆ.

99 ಮಂದಿಗೂ ಸಂಪರ್ಕದಿಂದ ಸೋಂಕು ತಗಲಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4193 ಕ್ಕೆ ತಲುಪಿದೆ. ಪ್ರಸ್ತುತ 1079 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3083 ಮಂದಿ ಗುಣಮುಖರಾಗಿದ್ದಾರೆ.
ನೀಲೇಶ್ವರ, ಪಳ್ಳಿಕೆರೆ, ಕುತ್ತಿಕೋಲು 5, ಕಯ್ಯೂರು ಚಿಮೇನಿ, ಉದುಮ ತಲಾ 3, ಚೆಂಗಳ, ಬದಿಯಡ್ಕ, ಕೊಡೋ ಬೇಳೂರು ತಲಾ 6, ಕುಂಬಳೆ 4, ಮಧೂರು, ಕಳ್ಳಾರ್, ಪುಲ್ಲೂರು ಪೆರಿಯ, ತ್ರಿಕ್ಕರಿಪುರ, ಕಾಸರಗೋಡು, ಬೇಡಡ್ಕ ತಲಾ 1, ಅಜಾನೂರು 8, ಚೆಮ್ನಾಡ್ 22 , ಕಾಞ0 ಗಾಡ್ ನಗರಸಭಾ ವ್ಯಾಪ್ತಿಯಲ್ಲಿ 19 ಮಂದಿಗೆ ಸೋಂಕು ತಗಲಿದೆ. ಚೆಂಗಳ ಪಂಚಾಯತ್ ವ್ಯಾಪ್ತಿಯಲ್ಲಿ 2 ಮತ್ತು 4 ವರ್ಷದ ಮಕ್ಕಳು ಸೋಂಕಿತರಲ್ಲಿ ಒಳಗೊಂಡಿದ್ದಾರೆ. ಓರ್ವ ಆರೋಗ್ಯ ಸಿಬಂದಿಗೂ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 5,335 ಮಂದಿ ನಿಗಾ ದಲ್ಲಿದ್ದು, 984 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.