ಉಡುಪಿ, ಆ. 25 (DaijiworldNews/SM): ಸಾಮಾಜಿಕ ಜಾಲತಾಣಗಳಿಂದ ದೇಶದ ಆಂತರಕ ಭದ್ರತೆಗೆ ದೊಡ್ಡ ಸವಾಲಾಗಿದೆ. ಇದೊಂದು ಹಿಟ್ ಆಂಡ್ ರನ್ ಕೇಸ್ ಇದ್ದ ಹಾಗೆ ಎಂದು ಆಂತರಿಕಾ ಭದ್ರತಾ ವಿಭಾಗ ಬೆಂಗಳೂರು ಇದರ ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕರಾದ ಭಾಸ್ಕರ್ ರಾವ್ ಹೇಳಿದರು.

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು "ಕೋಮು ಪ್ರಚೋದಕ ಪೊಸ್ಟ್ ಗಳು ದೇಶದ ಭದ್ರತೆಗೆ ಅಪಾಯಕಾರಿ. ಯಾರೋ ಒಬ್ಬರು ಊರಿನಲ್ಲಿ ಕುಳಿತುಕೋಂಡು ಒಂದು ಪೋಸ್ಟ್, ಒಂದು ಟ್ವಿಟ್ ಮಾಡಿ ಕೋಮು ಭಾವನೆಯನ್ನು ಕೆರಳಿಸಿ ಊರಲ್ಲಿ ಬಂಕಿ ಹಚ್ಚುತ್ತಾರೆ. ಆಂತರಿಕ ಭದ್ರತಾ ಇಲಾಖೆಯಲ್ಲಿ ಇದಕ್ಕಾಗಿ ಪ್ರತ್ಯೇಕವಾದ ಒಂದು ಸಾಮಾಜಿಕ ಜಾಲತಾಣ ವಿಭಾಗ ಕೂಡಾ ಇದೆ. ಇಂತಹವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕರಾವಳಿ ಜಿಲ್ಲೆಗಳಲ್ಲಿ ಸ್ಯಾಟ್ ಲೈಟ್ ಪೋನ್ ಗಳು ಮತ್ತೆ ಬಳಕೆ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು "ಈ ಬಗ್ಗೆ ಮಾಹಿತಿ ಇದೆ. ಯಾರು ಬಳಕೆ ಮಾಡಿದ್ದಾರೆ ಎಂಬ ಬಗ್ಗೆ ಕೂಡಾ ಮಾಹಿತಿ ಸಿಕ್ಕಿದೆ. ತನಿಖಾ ಹಂತದಲ್ಲಿ ಇರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾದ್ಯವಿಲ್ಲ. ಯಾರೇ ಆದರೂ ದೇಶ ವಿರೋಧಿ ಚಟುವಟಿಕೆ ಮಾಡುತಿದ್ದಲ್ಲಿ ಅವರು ಎಲ್ಲೇ ಇದ್ದರು ಅವರನ್ನು ಹುಡುಕಿ ಕ್ರಮ ಕೈ ಗೊಳ್ಳುತ್ತೇವೆ" ಎಂದರು.