ಬಂಟ್ವಾಳ, ಮೇ 01 : ಪತಿ-ಪತ್ನಿಯ ಜಗಳದಲ್ಲಿ ಪತಿ ತನ್ನ ಹೆಬ್ಬೆರಳನ್ನು ಕಳೆದುಕೊಂಡ ಘಟನೆ ಏ.೩೦ರ ಸೋಮವಾರ ಬಂಟ್ವಾಳದ ಬಡಗಬೆಳ್ಳೂರು ಸಮೀಪದ ರಾರಿಹುಡ್ಡೆ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಜನಾರ್ಧನ ಮಡಿವಾಳ ಅವರ ಮೊದಲ ಪತ್ನಿನಿಧನ ಹೊಂದಿದ ಕಾರಣ ನಂತರ ಸೀತಾ ಎಂಬಾಕೆಯನ್ನು ಎರಡನೇ ವಿವಾಹ ಆಗಿದ್ದರು. ಆದರೆ ಸೋಮವಾರ ಬೆಳಗ್ಗೆ ಇವರಿಬ್ಬರ ನಡುವೆ ಉಂಟಾದ ಮನಸ್ತಾಪ ವಿಕೋಪಕ್ಕೆ ಹೋಗಿ ತಲುಪಿತ್ತು.
ಸಿಟ್ಟಿಗೆದ್ದ ಪತ್ನಿ ಸೀತಾ ತನ್ನ ಪುತ್ರ ವಿಶ್ವನಾಥ್ ಮತ್ತು ಆತನ ಸ್ನೇಹಿತ ಲೋಕೇಶ್ ನೊಂದಿಗೆ ಸೇರಿ ಪತಿ ಜನಾರ್ಧನ ಮಡಿವಾಳ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯ ಸಂದರ್ಭದಲ್ಲಿ ಜನಾರ್ಧನ ಅವರ ಹೆಬ್ಬೆರಳು ತುಂಡಾಗಿದೆ ಎಂದು ಗಾಯಾಳು ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.