ಈ ಕುಡಿ ಮೀಸೆಯ ಯುವಕ ಕರಾವಳಿಯಲ್ಲಿ ಗುರುತಿಸಿಕೊಂಡಿದ್ದಕ್ಕಿಂಲೂ ಹೆಚ್ಚು ಕರ್ನಾಟಕ ಗಲ್ಲಿ ಗಲ್ಲಿಯಲ್ಲೂ ಕಚಗುಳಿ ಇಟ್ಟವನು. ರೀಯಾಲಿಟಿ ಶೋದಿಂದಲೇ ಫೇಮಸ್ ಆಗಿದ್ದ ಯುವಕನ ಕೈಯಲ್ಲಿದ ಸಾಲು ಸಾಲು ಆಫರ್. ಈತ ಡೈಲಾಗ್ ಹೇಳ್ತಾ ಇದ್ದಾನೆ ಅಂದ್ರೆ ಅವನ ಮುಂದಿರೋರು ಹೊಟ್ಟೆ ಹುಣ್ಣಾಗೋವರೆಗೆ ನಗೋದು ಖಚಿತ. ಯಾಕೆಂದ್ರೆ ಆತನ್ ಮಾನ್ಯರಿಸಂಯೇ ಅಂಥದ್ದು. ಪ್ಯಾಂಕ್,ಪ್ಯಾಂಕ್ನ್ ಮೀನ್ ಬೋಡೇ ಮೀನ್ ಹೀಗೆ ಕುಡ್ಲದ ಗಲ್ಲಿ ಗಲ್ಲಿಯಲ್ಲಿ ಸಾಮಾನ್ಯವಾಗಿ ಕೇಳಿ ಬರ್ತಾ ಇದ್ದ ಡೈಲಾಗ್ ನ್ನು ಕರ್ನಾಟಕದ ಮನೆ ಮನೆಗೆ ತಲುಪಿಸಿದ ಕಿಲಾಡಿ ಈತ.ಹೆಸರು ಹೀತೇಶ್ ಕಾಪಿನಡ್ಕ.ಖಾಸಗಿ ಚಾನೆಲ್ ನ ಕಾಮಿಡಿ ಕಿಲಾಡಿ ಎಂಬ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸೋ ತನಕ ಬೆಳ್ತಂಗಡಿಯ ಕಾಪಿನಡ್ಕಕ್ಕೆ ಸೀಮಿತವಾಗಿದ್ದ ಈ ಹುಡುಗನ ಲಕ್ ಆ ಬಳಿಕ ಸಂಪೂರ್ಣವಾಗಿ ಬದಲಾಯಿತು. ಈ ರಿಯಾಲಿಟಿ ಶೋದಲ್ಲಿ ತೃತೀಯ ಸ್ಥಾನ ಗಳಿಸಿದ್ದು ಮಾತ್ರವಲ್ಲ ಮುಂದೆ ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ನ ಬೇಡಿಕೆಯ ನಟನಾಗಿ ಬಿಟ್ಟ. ಈಗಾಗಲೇ ಗೋವಿಂದ್ ಗೌಡ ನಿರ್ದೇಶನದ ಜಂತರ್- ಮಂತರ್ ಚಿತ್ರದಲ್ಲಿ ಹೀರೋವಾಗಿ ಕಾಣಿಸಿಕೊಂಡಿದ್ದು, ಚಿತ್ರ ಮುಂದಿನ ತಿಂಗಳು ಬಿಡುಗಡೆಯ ಹಂತದಲ್ಲಿದೆ.ಇನ್ನು ರಿಯಾಲಿಟಿ ಶೋ "ಕಿಲಾಡಿ ಕುಟುಂಬ” ಮುಗಿದಿದ್ದು ಮುಂದೆ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ನಲ್ಲಿ ಕಾಣಿಸಿಕೊಳ್ಳಲ್ಲಿದ್ದೇನೆ ಅನ್ನುತ್ತಾರೆ ಹಿತೇಶ್.
ಕನಸುಗಳು ಸಾವಿರವಿದೆ, ಆದರೆ ಸದ್ಯ ನಟನೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕೆಂದಿರುವ ಹಿತೇಶ್ ಕಾಪಿನಡ್ಕ ಮುತ್ತಪ್ಪ ಪೂಜಾರಿ ಮತ್ತು ರತ್ನಾವತಿಯವರ ಸುಪುತ್ರ. ಕೋಸ್ಟಲ್ ವುಡ್ ನಲ್ಲಿ ಮಯೂರ್ ಶೆಟ್ಟಿ ನಿರ್ದೇಶನದ "ಮೈ ನೇಮ್ ಈಸ್ ಅಣ್ಣಪ್ಪ" ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದೇನೆ ಎಂದಷ್ಟೇ ಹೇಳೋ ಈ ಕಿಲಾಡಿ ಪಾತ್ರವೇನು ಅನ್ನೋದರ ಗುಟ್ಟು ಬಿಟ್ಟು ಕೊಟ್ಟಿಲ್ಲ. ಸ್ಯಾಂಡಲ್ ವುಡ್ ನ ಜತೆ ಜತೆಯಲ್ಲಿಯೇ ಕೋಸ್ಟಲ್ ವುಡ್ ನಿಂದಲೂ ಒಂದೆರಡು ಸಿನಿಮಾಗಳ ಅಫರ್ ಕೈಲ್ಲಿದ್ದು , ಅಂತಿಮ ನಿರ್ಧಾರ ಇನ್ನಷ್ಟೇ ಮಾಡಬೇಕಿದೆ ಎನ್ನುತ್ತಾರೆ. ಇನ್ನು ಹಾಸ್ಯಕ್ಕೆ ಪಾತ್ರಗಳ ಜತೆ ಜತೆಯಲ್ಲಿ ವಿಭಿನ್ನ ಪಾತ್ರಗಳಿಗೂ ಜೀವ ತುಂಬೋ ಆಸೆ ಇರುವ ಈ ಕರುನಾಡಿನ ಕಿಲಾಡಿ ಚಿತ್ರರಂಗದಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿ.