ಬೈಂದೂರು, ಆ 25 (Daijiworld News/MSP): ಬೈಂದೂರು ತಾಲೂಕು ಮರವಂತೆಯಲ್ಲಿ ಮೀನುಗಾರಿಕೆ ವೇಳೆ ಡಿಂಗಿ ದೋಣಿ ಪಲ್ಟಿಯಾದ ಘಟನೆ ಆ.26ರಂದು ಸಂಭವಿಸಿದೆ.



ಶ್ರೀನಿವಾಸ ಖಾರ್ವಿ ಗಂಗೊಳ್ಳಿ ಮಾಲಕತ್ವದ ಆದಿ ಆಂಜನೇಯ ಹೆಸರಿನ ಡಿಂಗಿ ದೋಣಿ ಮರವಂತೆ ಮಾರಸ್ವಾಮಿ ದೇವಸ್ಥಾನದ ಹತ್ತಿರ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಆಲೆಗಳ ಹೊಡೆತಕ್ಕೆ ದೋಣಿ ಪಲ್ಟಿಯಾಗಿದೆ.
ದೋಣಿಯಲ್ಲಿದ್ದ ರಾಮಖಾರ್ವಿ, ಶಂಕರ ಖಾರ್ವಿ, ಸುಭಾಶ್ ಖಾರ್ವಿ, ಕೃಷ್ಣ ಖಾರ್ವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ದೋಣಿಯ ಎರಡು ಇಂಜಿನ್, ಬಲೆ ಹಾಗೂ ದೋಣಿಗೆ ಹಾನಿಯಾಗಿದೆ. ದೋಣಿಯನ್ನು ಮೇಲೆತ್ತುವ ಸಂದರ್ಭ ದೋಣಿ ಮಾಲಿಕರಾದ ಶ್ರೀನಿವಾಸ ಖಾರ್ವಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.