ಉಳ್ಳಾಲ, ಮೇ 01 : ಕೇರಳ ರಾಜ್ಯ ಲಾಟರಿ ಈ ಬಾರಿ ಹೊಸಂಗಡಿಯ ಛಾಯಾಗ್ರಾಹಕರೊಬ್ಬರಿಗೆ ಒಲಿದಿದೆ. ಹೊಸಂಗಡಿ ಅಮ್ಮ ಲಾಟರಿ ಏಜೆನ್ಸಿಯಿಂದ ಏ.30ರಂದು 30.೦ ರೂ. ನಲ್ಲಿ ಖರೀದಿಸಿದ ಕೇರಳ ರಾಜ್ಯ ಲಾಟರಿ ವಿನ್ ವಿನ್ w458 ಕ್ಕೆ ರೂ. 65 ಲಕ್ಷ ಒಲಿದಿದೆ.
ಹೊಸಂಗಡಿ ಬಳಿಯ ಮಜಿಬೈಲು ಮಂಜಯ್ಯ ಹಿತ್ಲು ನಿವಾಸಿ ಪ್ರಭಾಕರ ಶೆಟ್ಟಿ ಅದೃಷ್ಟವಂತ. ಮಂಜೇಶ್ವರ ಬ್ಲಾಕ್ ಪಂಚಾಯಿತಿನ ಮಾಜಿ ಸದಸ್ಯರಾಗಿರುವ ಇವರು ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ಕೃಷಿಕರಾಗಿದ್ದಾರೆ. ಸಿಪಿಎಂ ನೇತಾರರಾಗಿರುವ ಇವರು ಉಪ್ಪಳ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಟ್ರಸ್ಟಿ ಯೂ ಆಗಿದ್ದಾರೆ. ವೃತ್ತಿಯಲ್ಲಿ ಛಾಯಗ್ರಾಹಕನಾಗಿರುವ ಪ್ರಭಾಕರ ಶೆಟ್ಟಿ ಏ.29ರ ಬೆಳಿಗ್ಗೆ ಮಂಗಳೂರಿಗೆ ಮದುವೆ ಸಮಾರಂಭಕ್ಕೆ ತೆರಳುವ ಸಂದರ್ಭ ಹೊಸಂಗಡಿಯಲ್ಲಿ ಅಮ್ಮ ಲಾಟರಿ ಏಜೆನ್ಸಿಯಿಂದ ಲಾಟರಿಯನ್ನು ಖರೀದಿಸಿದ್ದರು. ಏ.30 ರ ಸಂಜೆ ಹೊತ್ತಿಗೆ ಡ್ರಾ ದ ಬಗ್ಗೆ ವಿಚಾರಿಸಿದಾಗ ಏಜೆನ್ಸಿ ಮಾಲೀಕರು ಡ್ರಾ ಸಂಖ್ಯೆ ನೀಡಿದ್ದಾರೆ, ಬಳಿಕ ಮನೆಗೆ ತೆರಳಿ ಟಿಕೇಟು ನೋಡುತ್ತಿದ್ದಂತೆ ಅದೃಷ್ಟ ಲಕ್ಷ್ಮೀ ಒಲಿದಿದ್ದಳು. ಸದ್ಯ ಟಿಕೇಟನ್ನು ಮಂಜೇಶ್ವರ ಸರ್ವಿಸ್ ಕಾ ಆಪರೇಟಿವ್ ಬ್ಯಾಂಕ್ ಗೆ ಹಸ್ತಾಂತರಿಸಿದ್ದಾರೆ.
ಮಂಜಯ್ಯಹಿತ್ಲು ನಿವಾಸಿ ದಿ. ಸಚೀಂದ್ರ ಶೆಟ್ಟಿ ಹಾಗೂ ಸೀತಾ ಶೆಟ್ಟಿ ದಂಪತಿ ಪುತ್ರನಾಗಿರುವ ಪ್ರಭಾಕರ್ ಶೆಟ್ಟಿ ಮಧ್ಯಮ ವರ್ಗದಲ್ಲಿ ಬಾಳುವವರು. ಪತ್ನಿ ವನಿತಾ.ಪಿ.ಶೆಟ್ಟಿ ಹಾಗೂ ಮಕ್ಕಳಾದ ಸಾತ್ವಿಕಾ ಶೆಟ್ಟಿ, ಸಾನಿಧ್ಯ ಶೆಟ್ಟಿ ಇವರ ಕುಟುಂಬವಾಗಿದೆ.
ಮನೆಯ ಲೋನ್ ಮತ್ತು ಕಾರಿನ ಲೋನ್ ಕಟ್ಟುತ್ತಾ ಸಂಸಾರ ಮುನ್ನಡೆಸುತ್ತಿದ್ದೆನು. ಇದೀಗ ಲಾಟರಿ ಒಲಿದಿರುವುದರಿಂದ ಲೋನಿನಿಂದ ಮುಕ್ತಿಗೊಳ್ಳುವ ಜತೆಗೆ ಮಕ್ಕಳಿಗೆ ಉನ್ನತ ವ್ಯಾಸಾಂಗ ನಡೆಸಲು ದೇವರು ಕೊಟ್ಟ ವರದಾನ ಆಗಿದೆ ಎಂದಿದ್ದಾರೆ
ವಿಚಿತ್ರವೆಂದರೆ ಹೊಸಂಗಡಿಯ ರಾಜೇಶ್ ಎಂಬವರು ನಡೆಸಿಕೊಂಡು ಬರುತ್ತಿರುವ ಅಮ್ಮ ಲಾಟರಿ ಏಜೆನ್ಸಿಯಿಂದ ಪಡೆಯಲಾದ ಮೂರೂ ಟಿಕೇಟುಗಳಿಗೂ ಹಣ ಒಲಿದಿದೆ. ಹೊಸಂಗಡಿ ವ್ಯಾಪ್ತಿಯ ಇತರೆ ಮೂವರಿಗೆ ರೂ. 10,000 ನಗದು ಒಲಿದಿದೆ. ರಾಜೇಶ್ ಅವರು ಕಾಸರಗೋಡಿನ ಪ್ರತಿಷ್ಠಿತ ಮಧು ಲಾಟರಿ ಏಜೆನ್ಸಿಯಿಂದ ಟಿಕೇಟು ಪಡೆದುಕೊಂಡು ಮಾರಾಟ ನಡೆಸುವವರಾಗಿರುತ್ತಾರೆ. ಫೆ. 7 ರಂದು ಮಾರಾಟ ಮಾಡಿದ್ದ ಅಕ್ಷಯ ಲಾಟರಿಗೆ ರೂ. 2 ಲಕ್ಷ ಹಣ ಒಲಿದಿತ್ತು. ಮಾಧವ ಸುಂದರಿ ದಂಪತಿ ಪುತ್ರ ರಾಜೇಶ್ ಎಸ್ ಎಸ್ ಎಲ್ ಸಿ ಕಲಿತು ಹೊಸಂಗಡಿ ಸಿಮೆಂಟಿನ ಅಂಗಡಿಯಲ್ಲಿ ತಲೆಹೊರೆ ಕಾರ್ಮಿಕರಾಗಿ 8 ವರ್ಷ ಸೇವೆ ಸಲ್ಲಿದ್ದರು. ಅದನ್ನು ಬಿಟ್ಟು ಕಳೆದ 3 ವರ್ಷಗಳಿಂದ ಕಾಸರಗೋಡಿನ ಪ್ರತಿಷ್ಠಿತ ಮಧು ಲಾಟರಿಯನ್ನು ಹೊಸಂಗಡಿಯಲ್ಲಿ ಮಾರಾಟ ನಡೆಸುತ್ತಿದ್ದಾರೆ. ದಿನಕ್ಕೆ 200 ರಷ್ಟು ಟಿಕೇಟು ಮಾರಾಟ ನಡೆಸುತ್ತಿದ್ದಾರೆ. ಪತ್ನಿ ಆಶಾಲತಾ, ಮಗಳು ಭುವಿ ಜತೆಗಿನ ಕುಟುಂಬ ಅವರದ್ದಾಗಿದೆ.