ಕಾಸರಗೋಡು, ಆ. 26 (DaijiworldNews/SM): ಜಿಲ್ಲೆಯಲ್ಲಿ ಬುಧವಾರ 101 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 14 ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ಪತ್ತೆಯಾಗಿದೆ.

ಒಟ್ಟು 90 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 9 ಮಂದಿ ವಿದೇಶ ಹಾಗೂ ಇಬ್ಬರು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಈ ನಡುವೆ 40 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ 15 ಮಂದಿ, ಕಾಞಂಗಾಡ್ ವ್ಯಾಪ್ತಿಯಲ್ಲಿ 7, ಮಂಗಲ್ಪಾಡಿ, ಮಧೂರು, ತ್ರಿಕ್ಕರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಮೂವರು, ಕುಂಬಳೆ ವ್ಯಾಪ್ತಿಯಲ್ಲಿ 8 ಮಂದಿ, ಉದುಮ ವ್ಯಾಪ್ತಿಯಲ್ಲಿ 15 ಮಂದಿ, ಬೇಡಡ್ಕ, ಪಳ್ಳಿಕೆರೆ ವ್ಯಾಪ್ತಿಯಲ್ಲಿ ತಲಾ ನಾಲ್ವರು, ಕುತ್ತಿಕೋಲು, ವರ್ಕಾಡಿ, ಎಣ್ಮಕಜೆ, ಮುಳಿಯಾರು, ಪುಲ್ಲೂರು ಪೆರಿಯ ಪಿಲಿಕ್ಕೋಡ್, ವಲಿಯಪರಂಬ ವ್ಯಾಪ್ತಿಯಲ್ಲಿ ತಲಾ ಒಬ್ಬರು, ಚೆಂಗಳದಲ್ಲಿ 6 ಮಂದಿ, ಕಾರಡ್ಕ, ಕಳ್ಳಾರ್ ನಲ್ಲಿ ತಲಾ ಇಬ್ಬರು, ಅಜಾನೂರು ವ್ಯಾಪ್ತಿಯ 12 ಮಂದಿಗೆ ಸೋಂಕು ದೃಢಪಟ್ಟಿದೆ. ಪ್ರಸ್ತುತ 5430 ಮಂದಿ ನಿಗಾದಲ್ಲಿದ್ದಾರೆ.