ಮೈಸೂರು, ಮೇ 01: ಚಾಮರಾಜನಗರ ಜಿಲ್ಲೆಗೆ ಆಗಮಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದು, ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸಿದ್ದಾರೆ. ಮೈಸೂರಿನ ಮಠ, ಸಾಹಿತಿ, ಡಾ.ರಾಜ್ ಕುಮಾರ್ ಇತ್ಯಾದಿ ಮಹಾಪುರುಷರ ಹೆಸರನ್ನು ಮೊದಲಿಗೆ ಪ್ರಸ್ತಾಪಿಸಿದ ಮೋದಿ, ಕರ್ನಾಟಕದಲ್ಲಿ ಬಿಜೆಪಿಯ ಬಿರುಗಾಳಿ ಎದ್ದಿದೆ ನೀವು ಬಿಸಿಲಿನಲ್ಲಿ ನಿಂತು ಕಾಯುತ್ತಿದ್ದೀರಿ .ಇದಕ್ಕಾಗಿ ನಿಮ್ಮ ಶ್ರಮವನ್ನು ನಾವು ವ್ಯರ್ಥ ಮಾಡುವುದಿಲ್ಲ. ಭಾರತದ 1,800 ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ನೀಡುವ ಕಾರ್ಯವನ್ನು ನಾವು ಮಾಡಿದ್ದೇವೆ. ಇದಕ್ಕೆ ನಾನು ದೇಶದ ಕಾರ್ಮಿಕರಿದೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
ಬಳಿಕ ರಾಹುಲ್ ಗಾಂಧಿಗೆ ಸವಾಲು ಹಾಕಿದ ಅವರು ಯಾವುದೇ ಪೇಪರ್, ಚೀಟಿ ನೀಡದೆ ನಿರರ್ಗಳವಾಗಿ ಭಾಷಣ ಮಾಡುವಂತೆ, ಸವಾಲು ಹಾಕಿದರು.ಯಾವ ಪೇಪರ್ ಗಳೂ ಇಲ್ಲದೆಯೇ ಕರ್ನಾಟಕದಲ್ಲಿ ನೀವು ಮಾಡಿರುವ ಸಾಧನೆಗಳ ಬಗ್ಗೆ ಹಿಂದಿ, ಇಂಗ್ಲೀಷ್ ಅಥವಾ ನಿಮ್ಮ ಮಾತೃ ಭಾಷೆ, ಯಾವುದರಲ್ಲಿ ಆದರೂ 15 ನಿಮಿಷಗಳ ಕಾಲ ನಿಂತು ಮಾತನಾಡುವಂತೆ ಸವಾಲು ಹಾಕಿದ್ದಾರೆ. ರಾಹುಲ್ ಮಾತಾಡಿದರೆ ನನಗೆ ಅಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದರು. ಆದರೆ ರಾಹುಲ್ ಗಾಂಧಿ 15 ನಿಮಿಷ ಮಾತನಾಡುವುದೇ ದೊಡ್ಡ ಸಂಗತಿ, 15 ನಿಮಿಷ ನಾನು ಕುಳಿತುಕೊಳ್ಳುವುದಿಲ್ಲ ಎಂಬುದನ್ನು ಕೇಳಿದರೇ ನಗು ಬರುತ್ತದೆ. ಕಾಂಗ್ರೆಸ್ ನವರು ಹೆಸರು ಮಾಡಿದವರು, ನಾವು ಕಾರ್ಮಿಕರು ಅವರ ಮುಂದೆ ಹೇಗೆ ತಾನೆ ಕುಳಿತುಕೊಳ್ಳಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ಸೋಲಿನ ಭಯದಿಂದ ಎರಡೂ ಕಡೆ ಚುನಾವಣೆಗೆ ನಿಂತಿದ್ದಾರೆ ಎಂದರು.