ಮಂಗಳೂರು, ಮೇ 01 : ಫಿನಿಕ್ಸ್ ಫಿಲಂಸ್ ಅರ್ಪಿಸುವ ಮೂಲ ಪಾಡ್ದನ ಆಧಾರಿತ ಕಾರ್ನಿಕದ ಕಲ್ಲುರ್ಟಿ ಚಿತ್ರೀಕರಣದ ಮುಹೂರ್ತ ಸಮಾರಂಭವು ಏ.30ರಂದು ಸಜಿಪ ಬಳಿಯ ಪನೋಲಿಬೈಲ್ ದೇವಸ್ಥಾನದಲ್ಲಿ ಜರಗಿತು. ಶ್ರೀ ಕ್ಷೇತ್ರ ಪನೋಲಿಬೈಲ್ ಕಲ್ಲುರ್ಟಿ ದೇವಸ್ಥಾನದ ಮೊಕ್ತೇಸರರಾದ ಬಾಬು ಮೂಲ್ಯ ಜ್ಯೋತಿ ಬೆಳಗಿಸುವ ಮೂಲಕ ಮುಹೂರ್ತ ಸಮಾರಂಭ ನೆರವೇರಿಸಿದರು.
ಕೆ. ನಿರ್ಮಲಾ ದೇವಿ ಕ್ಯಾಮರ ಚಾಲನೆ ಮಾಡಿದರು. ಚಿತ್ರ ನಿರ್ಮಾಪಕ ಡಾ. ಸಂಜೀವ ದಂಡೆಕೇರಿ ಆರಂಭ ಫಲಕ ತೋರಿಸಿದರು. ಸಮಾರಂಭದಲ್ಲಿ ವಿಜಯಕುಮಾರ್ ಕೊಡಿಯಾಲ್ಬೈಲ್ ,ವಿಜಿಪಾಲ್, ರಮೇಶ್ ಕುಲಾಲ್ ಪಣೋಲಿ ಬೈಲ್, ದಯಾನಂದ ಶೆಟ್ಟಿ ಪಣೋಲಿಬೈಲ್,ಮೋಹನ್ ಉಳ್ಳಾಲ್, ಸುರೇಶ್ ಪಂಡಿತ್, ಪ್ರೇಮ್ ಶೆಟ್ಟಿ ಸುರತ್ಕಲ್, ರಾಜೇಶ್ ಕುಡ್ಲ, ಸಂಪತ್, ನಾಗೇಶ್ ದೇವಾಡಿಗ ಚಿತ್ರ ನಿರ್ದೇಶಕ ಮಹೇಂದ್ರ ಕುಮಾರ್, ಗಂಗಾಧರ ಕಿರೋಡಿಯನ್ ಉಪಸ್ಥಿತರಿದ್ದರು.
ಮಹೇಂದ್ರ ಕುಮಾರ್ ನಿರ್ಮಾಣ, ನಿರ್ದೇಶನದ ಈ ಚಿತ್ರಕ್ಕೆ ಗಂಗಾಧರ ಕಿರೋಡಿಯನ್ ತಾಂತ್ರಿಕ ನಿರ್ದೇಶಕರಾಗಿದ್ದಾರೆ. ಉಮಾಪತಿ ಅವರ ಛಾಯಾಗ್ರಹಣವಿದೆ. ಹಿತನ್ ಹಾಸನ್ ಸಂಗೀತ ನಿರ್ದೇಶನ ನೀಡಿದ್ದಾರೆ. ಕ್ಯಾಮರಾ ಸಹಾಯಕರಾಗಿ ಜೀವನ್, ಸಹ ನಿರ್ದೇಶಕರಾಗಿ ಪ್ರತಾಪ್ ಸಾಲಿಯಾನ್ ದುಡಿಯಲಿದ್ದಾರೆ. ಮೇಕಪ್ ದೇವರಾಜ್,ಸಹ ಛಾಯಗ್ರಾಹಕರಾಗಿ ಜೆ.ಜೆ. ಶರ್ಮಾ, ಯೂನಿಟ್ನಲ್ಲಿ ರಣಧೀರ್ ನಾಯ್ಕ್ ಸಹಕರಿಸಲಿದ್ದಾರೆ. ನಾಗೇಶ್ ದೇವಾಡಿಗ, ಶಶಿ ಶಿರ್ಲ ಗೀತ ಸಾಹಿತ್ಯ ನೀಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಾರ್ಕಳದ ಸುತ್ತಮುತ್ತ ಒಂದೇ ಹಂತದಲ್ಲಿ 30 ದಿನಗಳ ಕಾಲ ನಡೆಯಲಿದೆ.
ತಾರಾಗಣದಲ್ಲಿ ಶೈಲೇಂದ್ರ ಡಿ.ಜೆ., ಚಾಂದಿನಿ ಅಂಚನ್, ಮಹೇಂದ್ರ ಕುಮಾರ್, ಶಾಲಿನಿ ಮರಕಡ, ರಘುರಾಮ್ ಶೆಟ್ಟಿ, ಹರಿಣಿ ಕೆಂಚಾರ್, ನಾಗೇಶ್ ಸಾಲಿಯಾನ್, ಲಾವಣ್ಯ ಕದ್ರಿ, ಮೋಹಿಕ ಕೊಲ್ಯ, ವಿಕಾಶ್, ಮೋಹನ್ ಬೋಳಾರ್, ಅಮೀನ್ ಟೈಲರ್, ಶ್ರೀನಿವಾಸ ದೇವಾಡಿಗ, ಪ್ರಶಾಂತ್ ಜೋಗಿ, ಮನೋಜ್ ಭಂಡಾರಿ, ಕುಮಾರ್ ಪಾಲೇಮಾರ್, ಕು. ಈಶಿಕಾ, ರೇಖಾ ರಂಜಿತ್ ಕದ್ರಿ, ರಾಜೇಶ್ ಆಚಾರ್ಯ ಮುಂತಾದವರಿದ್ದಾರೆ