ಮಂಗಳೂರು, ಆ.27(DaijiworldNews/HR): ಏರ್ ಇಂಡಿಯಾದ ಮುಂಗಡ ಕಾಯ್ದಿರಿಸುವ ಹಾಗೂ ಟಿಕೆಟ್ ಬುಕ್ಕಿಂಗ್ ಕಚೇರಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಸ್ಟ್ 31 ರಿಂದ ಸ್ಥಳಾಂತರಿಸಲಾಗಿದೆ.

ವ್ಯವಹಾರದ ಸಮಯವು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9:45 ರಿಂದ ಸಂಜೆ 5:20 ರವರೆಗೆ ಹಾಗೂ ಮಧ್ಯಾಹ್ನ 1 ರಿಂದ 1:45 ರವರೆಗೆ ಊಟದ ವಿರಾಮ ಇರುತ್ತದೆ.
ಸಾರ್ವಜನಿಕರು ಏರ್ ಇಂಡಿಯಾ, ವಿಮಾನ ನಿಲ್ದಾಣ ಕಚೇರಿ ಸಂಖ್ಯೆ 0824-2220450 / 2220451 ಗೆ ಸಂಪರ್ಕಿಸಬಹುದು.