ಕಾಸರಗೋಡು, ಆ. 27 (DaijiworldNews/SM): ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಮೊದಲ ಬಾರಿಗೆ ಇನ್ನೂರರ ಗಡಿ ದಾಟಿದೆ. ಗುರುವಾರ 231 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು, ಈ ಪೈಕಿ 219 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಹಾಗೂ ಹೊರರಾಜ್ಯಗಳಿಂದ ಬಂದ ತಲಾ ಆರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ನಡುವೆ 85 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇಂದಿನ ಸೋಂಕಿತರ ಮೂಲಕ ಮೊದಲ ಬಾರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದಂತಾಗಿದೆ.
ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4525 ಕ್ಕೆ ತಲಪಿದೆ. ಈ ಪೈಕಿ 3208 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. 1283 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 34 ಮಂದಿ ಮೃತಪಟ್ಟಿದ್ದಾರೆ. 5532 ಮಂದಿ ನಿಗಾದಲ್ಲಿದ್ದು, 1035 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.