ಕಾಸರಗೋಡು, ಆ. 27 (DaijiworldNews/SM): ಅಂತಾರಾಜ್ಯ ಸಂಚಾರಕ್ಕೆ ಸಂಪೂರ್ಣ ಮುಕ್ತಗೊಳ್ಳುವ ತನಕ ಹೋರಾಟ ಮುಂದುವರಿಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು , ಗಡಿಯ ರಸ್ತೆಗಳನ್ನು ಮುಚ್ಚಿರುವುದರಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕಕ್ಕೆ ತೆರಳಿದ್ದಲ್ಲಿ ಕೊರೋನಾ ಕೇರಳದ ವಾದ ಸರಿಯಲ್ಲ. ಕೇಂದ್ರ ಸರಕಾರದ ಮಾನದಂಡದಂತೆ ಗಡಿ ಬಂದ್ ಮಾಡುವಂತಿಲ್ಲ. ಗಡಿಯಲ್ಲಿ ಯಾವುದೇ ನಿರ್ಬಂಧ ಸಾಧ್ಯ ಇಲ್ಲ. ಕಾಸರಗೋಡಿನಿಂದ ಮಂಗಳೂರಿಗೆ ಉದ್ಯೋಗಕ್ಕೆ ತೆರಳುತ್ತಿದ್ದವರು ಇಂತಹ ನಿರ್ಬಂಧಗಳಿಂದ ಕೆಲಸ ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಕಾಸರಗೋಡಿನಿಂದ ಕರ್ನಾಟಕಕ್ಕೆ ಪರೀಕ್ಷೆ ವಿವಿಧ ಬರೆಯಲು ತೆರಳಿದ್ದ ಯಾರಿಗೂ ಸೋಂಕು ದೃಢಪಟ್ಟಿಲ್ಲ. ದೈನಂದಿನ ಪಾಸ್ ನಲ್ಲಿ ತೆರಳಿದ ಐದು ಮಂದಿಗೆ ಮಾತ್ರ ಸೋಂಕು ಪತ್ತೆಯಾಗಿತ್ತು. ಸಮುದಾಯ ಹರಡುವಿಕೆ ಉಂಟಾಗಿಲ್ಲ. ಇಲ್ಲ ಸಲ್ಲದ ವಾದ ಮುಂದಿಟ್ಟು ಜಿಲ್ಲಾಡಳಿತ ಅಂತಾರಾಜ್ಯ ಸಂಚಾರಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.
ಕೇರಳ ಹೈಕೋರ್ಟ್ ನಾಲ್ಕು ರಸ್ತೆಗಳನ್ನು ತೆರೆಯಲು ಆದೇಶಕೊಟ್ಟಿದ್ದರೂ ಗಾಡಿಯಲ್ಲಿ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಅವೈಜ್ಞಾನಿಕ ಮಾನದಂಡ ಗಡಿ ಪ್ರದೇಶದ ಜನತೆ ತಾಳ್ಮೆಗೆಡಿಸುತ್ತಿದೆ ಎಂದು ಆರೋಪಿಸಿದರು. ದೈನಂದಿನ ಪಾಸ್ ರದ್ದುಗೊಳಿಸಿದ್ದರೂ ಪ್ರಯಾಣಿಕರ ಸಮಸ್ಯೆ ಮುಗಿಯುವುದಿಲ್ಲ. ಮಾನದಂಡದಲ್ಲಿ ಬದಲಾವಣೆ ಇಲ್ಲ. ಇದು ಜನರನ್ನು ಮೂರ್ಖರನ್ನಾಗಿಸುವ ತಂತ್ರ ಎಂದರು.
ಗಡಿಯ ಎಲ್ಲಾ ರಸ್ತೆಗಳನ್ನು ತೆರೆಯುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯ ಸಮಿತಿ ಉಪಾಧ್ಯಕ್ಷ ಪಿ. ಸುರೇಶ್ ಕುಮಾರ್ ಶೆಟ್ಟಿ, ವಲಯ ಕಾರ್ಯದರ್ಶಿ ಸತೀಶ್ಚ೦ದ್ರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.