ಉಡುಪಿ, ಆ. 28 (DaijiworldNews/MB) : ಶಿಕ್ಷಣ ಇಲಾಖೆ ಮಕ್ಕಳಿಗೆ ಆನ್ಲೈನ್ ತರಗತಿ ಶುರು ಮಾಡಿದೆ. ಆದರೆ ವಾಸ್ತವದಲ್ಲಿ ಅದೆಷ್ಟು ಮಕ್ಕಳಿಗೆ ಸ್ಮಾರ್ಟ್ ಫೋನ್ ಅವಶ್ಯಕತೆ ಇದೆ ಎಂಬುದನ್ನು ಅರಿತು ಕೊಂಡಿಲ್ಲ. ಇಂತಹ ಸೂಕ್ಷ್ಮತೆಯನ್ನು ಅರಿತ ಕರಾವಳಿಯ ಈ ಮೂವರು ಪಿಯುಸಿ ವಿದ್ಯಾರ್ಥಿನಿಯರು ಹೊಸ ಚಿಂತನೆಯನ್ನು ಮಾಡಿ ಉಡುಪಿಯಲ್ಲಿ ವಿಶಿಷ್ಟ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ.






ಈ ಮೂವರು ವಿದ್ಯಾರ್ಥಿನಿಯರು ಅವನಿ ಶೆಟ್ಟಿ, ಅಧಿತ್ರಿ ಕಾಮತ್, ಕೇಕಿ ಆರ್ ತಲ್ಲೂರು. ಆಗಸ್ಟ್ ೪ ಕ್ಕೆ ಹುಟ್ಟಿಕೊಂಡ ಈ ಚಿಂತನೆಗೆ "ದಿ ಸುಲಿತ್ ಕ್ಯಾಂಪೈನ್ " ಹೆಸರಿಟ್ಟಿದ್ದಾರೆ. ಅಂದರೆ, "Doing Something that is worth" ಅಂತ ಅರ್ಥ.
ಇವರು ಯಾವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ನ ನಿಜವಾದ ಅಗತ್ಯವಿದೆಯೋ ಅವರಿಗೆ ಮೊಬೈಲ್ ಒದಗಿಸುವ ಸೇವೆ ಮಾಡುತ್ತಿದ್ದಾರೆ.
ಹಣಕಾಸು ಮತ್ತು ದೇಶೀಯ ಮೊಬೈಲ್ ಕೊಡುವ ಚಿಂತನೆಯ ನಡುವೆ ತಮ್ಮ ಅಭಿಯಾನ ಆಗಸ್ಟ್ನಲ್ಲಿ ಆರಂಭಿಸಿಯೇ ಬಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಯಾನದ ಬಗ್ಗೆ ಪೋಸ್ಟರ್ಗಳನ್ನು ಹಾಕಿದಾಗ ಮಕ್ಕಳೆಂಬ ಕಾರಣಕ್ಕೆ ಪ್ರತಿಕ್ರಿಯೆ ನಿಧಾನವಾಗಿಯೇ ಸಿಕ್ಕಿತ್ತು. ಆದರೆ ಈ ಮಕ್ಕಳ ಪೋಷಕರು, ಸ್ನೇಹಿತರಿಂದ, ನೆರೆಹೊರೆಯವರಿಂದ ಉತ್ತಮ ಬೆಂಬಲ ಪ್ರೋತ್ಸಾಹ ದೊರಕ್ಕಿತು.
ನಾವು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ ನೋಡಿ, ಮಂಗಳೂರಿನವರೊಬ್ಬರು ತಮ್ನ ಪೋನ್ ಕೊಟ್ಟಿದ್ದಾರೆ. ಇದನ್ನು ಬದಲಾಯಿಸದೆ ಹಾಗೆಯೇ ಮಕ್ಕಳಿಗೆ ಕೊಟ್ಡಿದ್ದೇವೆ ಎನ್ನುತ್ತಾರೆ ಬಾಲೆಯರು.
ಕೆಲವು ದಾನಿಗಳು ತಮ್ಮ ಮೊಬೈಲ್ ನ್ನು ದಾನ ಮಾಡಿದ್ದಾರೆ. ಇನ್ನು ಇಂಟೆಲ್ ಕಂಪನಿಯ ಇಂಟೆಲ್ ಎ ೨೩ ಮಾಡಲ್ ಸೆಟ್ಟನ್ನು ಹೋಲ್ ಸೇಲ್ ಡೀಲರ್ ಖರೀದಿಸಿದ್ದು ಚೇರ್ಕಾಡಿಯ ಶಾರದಾ ಹೈಸ್ಕೂಲಿನ ಹನ್ನೊಂದು ಮಂದಿ ಮಕ್ಕಳಿಗೆ ಅಗಸ್ಟ್ 20 ರಂದು ರೂ 6000 ಮೌಲ್ಯದ ಹೊಚ್ಚ ಹೊಸ ಫೋನ್ ಕೊಡುಗೆ ನೀಡಿ ಸಾಹಸ ಮೆರೆದಿದ್ದಾರೆ. ಅಲ್ಲದೆ ಬೇರೆ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಕೊಡುಗೆ ಮಾಡಿದ್ದಾರೆ ಅನ್ನುವುದು ಪ್ರಶಂಸನೀಯ.
ಸಂಗ್ರಹಿಸಿದ ಹಣ ಇನ್ನೂ ಸಾಕಷ್ಟು ಮಿಕ್ಕಿದ್ದು, ಇನ್ನೂ ಬೇರೆ ಶಾಲೆಗಳಲ್ಲಿ ಅಗತ್ಯ ಇರುವ ಮಕ್ಕಳಿಗೆ ಫೋನ್ ವಿತರಿಸುವ ತಯಾರಿಯಲ್ಲಿದ್ದಾರೆ. ಉಡುಪಿಗಿಂತ ಉತ್ತರ ಕರ್ನಾಟಕ ಕಡೆಗೆ ಹೆಚ್ಚು ಬೇಡಿಕೆ ಬಂದಿತ್ತು. ಇವರ ನಿರೀಕ್ಷೆಗಿಂತ ಸ್ಮಾರ್ಟ್ ಫೋನ್ಗೆ ಬೇಡಿಕೆಯೇ ಜಾಸ್ತಿ ಬಂದಿತ್ತು.
"ನಮ್ಮಂತೆಯೇ ಇತರ ಮಕ್ಕಳು ಕೂಡ ಕಲಿಯಬೇಕು. ಇಂತಹ ಆರ್ಥಿಕ ಸಂಕಷ್ಟ ದಲ್ಲಿ ಕೆಲವು ಪೋಷಕರು ಮಕ್ಕಳಿಗೆ ಪೋನ್ ಒದಗಿಸಲು ಹರಸಾಹಸ ಪಡುತ್ತಿರುವುದನ್ನು ಗಮನಿಸಿದ್ದೇವೆ. ಅದಕ್ಕಾಗಿ ನಾವು ಈ ಅಭಿಯಾನ ಪ್ರಾರಂಭ ಮಾಡಿದೆವು ಎನ್ನುತ್ತಾರೆ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಅವನಿ.
"ಸದ್ಯ ನಮಗೆ ಪೋನ್ ಲಭ್ಯತೆ ಮತ್ತು ಮೊತ್ತ ಸೀಮಿತವಾಗಿರುದರಿಂದ ಉಡುಪಿಯ ಎಸ್ ಎಸ್ ಎಲ್ ಸಿಯ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯತೆ ಕೊಡುತ್ತಿದ್ದೇವೆ. ಇಲ್ಲಿ ಬೇಡಿಕೆ ಪುಲ್ ಪಿಲ್ ಆದರೆ ಮುಂದೆ ಬೇರೆ ಜಿಲ್ಲೆಯ ಶಾಲೆಯನ್ನು ಸಂಪರ್ಕಿಸುತ್ತೇವೆ " ಎನ್ನುತ್ತಾರೆ ಅಧಿತ್ರಿ ಕಾಮತ್.
ಕೇಕಿ ತಲ್ಲೂರ್ ಶಾಲೆಯನ್ನು ಅಥವಾ ಬೇಡಿಕೆಯ ಬಗ್ಗೆ, ಶಾಲೆಯನ್ನು ಸಂಪರ್ಕಿಸುವತ್ತ ಗಮನ ಹರಿಸಿದರೆ, ಹಣವು ಅವನಿಯ ಅಕೌಂಟ್ ಗೆ ಮತ್ತು ಅಧಿತ್ರಿ ಅಕೌಂಟ್ಸ್ ಎಕ್ಸೆಲ್ ಶೀಟ್ ನಿರ್ವಹಿಸುತ್ತಾರೆ. ನಿಧಿ ಸಂಗ್ರಹವನ್ನು ಬಹಳ ಪಾರದರ್ಶಕ ವಾಗಿ ಈ ಮೂವರೂ ಜಾಗರೂಕರಾಗಿ ನಿಭಾಯಿಸುತ್ತಿದ್ದಾರೆ.
"ಬಹುಶಃ ಈ ಆನ್ ಲೈನ್ ಶಿಕ್ಷಣ ಪಡೆಯಲು ಮಕ್ಕಳಿಗೆ ಅಗತ್ಯವಾಗಿಬೇಕು. ನಾವು ಇಲ್ಲಿ ದಾನಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿದ್ದೇವೆ. ಈಗಷ್ಟೇ ಅಭಿಯಾನ ಆರಂಭವಾಗಿದೆ. ಇದನ್ನು ಇಲ್ಲಿಗೆ ನಿಲ್ಲಿಸಲ್ಲ. ಆದಷ್ಟು ನಮ್ಮ ಸಾಮರ್ಥ್ಯ ದಿಂದ ಗುರಿತಲುಪಲು ಪ್ರಯತ್ನ ಮಾಡುತ್ತೇವೆ. ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮೊಬೈಲ್ ಕೊಟ್ಟಾಗ ಅವರ ಮುಖದಲ್ಲಿ ಮೂಡುವ ನಗು, ಕೃತಜ್ಞತಾಭಾವ ಕಂಡಾಗ ನಮಗೂ ಸಾರ್ಥಕ್ಯ ಮನೋಬಾವನೆ ಅನಿಸುತ್ತದೆ, ಸೇವೆ ಮಾಡುವ ಮನಸ್ಸಿದ್ದರೆ ನಿಮ್ಮ ನೆರೆಯ ಮಕ್ಕಳಿಗೆ ಅಗತ್ವಿರುವವರಿಗೆ ಸ್ಮಾರ್ಟ್ ಫೋನ್ ಒಳ್ಳೆಯ ಕಾರ್ಯಕ್ಕೆ ದಾನ ಮಾಡಿ" ಎನ್ನುತ್ತಾರೆ ಕೇಕಿ.
ಈ ಮೂವರು ಸ್ನೇಹಿತೆಯರು ಬೇರೆ ಬೇರೆ ಕಾಲೇಜಿನಲ್ಲಿ ಕಲಿಯುತ್ತಿದ್ದರೂ ಈ ಅಭಿಯಾನದ ಮೂಲಕ ಒಂದಾಗಿ, ತಾವು ವಿದ್ಯಾರ್ಥಿಗಳಾಗಿ ಮತ್ತೋರ್ವ ವಿದ್ಯಾರ್ಥಿಯ ಸಂಕಷ್ಟ ಪರಿಹರಿಸಲು ಸಾಥ್ ನೀಡಿದ್ದಾರೆ . ಈ ಮೂವರ ಸೇವೆಗೆ ಅಧ್ಬುತ ಚಿಂತನೆಗೆ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿದೆ.
ಚೇರ್ಕಾಡಿ ಶಾರದಾ ಹೈಸ್ಕೂಲಿನ ಪ್ರಾಂಶುಪಾಲರಾದ ಮಂಜುನಾಥ್ ನಾಯಕ್ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ. "ನಮ್ಮ ಶಾಲೆ ಯಲ್ಲಿ ಯಾರಲ್ಲಿ ಮೊಬೈಲ್ ಅಲಭ್ಯತೆ ಇರುವ ಬಗ್ಗೆ ಸರ್ವೆ ಮಾಡಿ ಪಟ್ಟಿ ಮಾಡಿದ್ದೇವೆ. ಅದರಲ್ಲಿ ೧೧ ಮಂದಿಗೆ ಈ ಅಭಿಯಾನದ ಪ್ರಯೋಜನ ಸಿಕ್ಕಿದೆ.
ಈ ಮೂವರ ಧೈರ್ಯ, ಉದಾತ್ತತೆ, ಮೆಚ್ಚುವಂತದ್ದು. ಸೇವಾ ಮನೋ ಭಾವನೆ ಹೀಗೆಯೇ ಮುಂದುವರಿಯಲಿ.ಇನ್ನಷ್ಟು ಮಕ್ಕಳು ಇವರಿಂದ ಸಹಾಯ ಪಡೆಯುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತ ಪಡಿಸಿದ್ದಾರೆ.
ಬದುಕಿನ ಬಗ್ಗೆ ಸಾಕಷ್ಟು ಅನುಭವ ನೀಡಿದ ಈ “ಪ್ರಾಜೆಕ್ಟ್” ಒಂದು ಹಂತಕ್ಕೆ ಯಶಸ್ವಿ ಆದ ಕುರಿತು ಮಕ್ಕಳಿಗೆ ಸಾರ್ಥಕ ಭಾವ. " Need for the hour" ಮಾತನ್ನು ಅರ್ಥ ಮಾಡಿಕೊಂಡು ಸೇವೆ ಮಾಡುತ್ತಿದ್ದಾರೆ. ಇವರ ಸೇವೆಗೆ ಮತ್ತಷ್ಟು ಬೆಂಬಲ ಸಿಗಲಿ ಎನ್ನುವುದು ಸರ್ವರ ಆಶಯ.