ಬೆಳ್ಮಣ್, ಆ. 28 (DaijiworldNews/MB) : ಆರೋಗ್ಯ ಸರಿಯಿಲ್ಲ ಎಂದು ಡೆಟ್ ನೋಟ್ ಬರೆದಿಟ್ಟು ಮಹಿಳೆಯೊಬ್ಬರು ಮನೆಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮುಂಜಾನೆ ಮುಂಡ್ಕೂರಿನ ಜಾರಿಗೆಕಟ್ಟೆ ಎಂಬಲ್ಲಿ ನಡೆದಿದೆ.




ಸುಮಾರು 40 ಪ್ರಾಯದ ಸಿಂತಿಯಾ ಎಂಬವರು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ಮಹಿಳೆ. ಕೃಷಿ ಕುಟುಂಬದಿಂದ ಬಂದ ಮಹಿಳೆ ಆರೋಗ್ಯ ಸರಿ ಇಲ್ಲ ಎನ್ನು ಡೆಟ್ ನೋಟ್ ಬರೆದಿಟ್ಟು ಶುಕ್ರವಾರ ಮುಂಜಾನೆ 7 ಗಂಟೆಯ ಸುಮಾರಿಗೆ ಮನೆಯ ಸಮೀದ ತೋಟದ ಬಾವಿಗೆ ಹಾರಿ ಮಹಿಳೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.