ಬೆಂಗಳೂರು, ಮೇ 02: ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಈ ಹಿಂದೆ ಅಮಿತ್ ಶಾ ಹೇಳಿಕೆಯೊಂದನ್ನು ನೀಡಿದ್ದು, ಅದಕ್ಕೆ ವ್ಯತಿರಿಕ್ತವಾದ ಹೇಳಿಕೆಯೊಂದನ್ನ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ರಾಷ್ಟ್ರೀಯ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಯಡಿಯೂರಪ್ಪ ,ರೆಡ್ಡಿ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ’ಎರಡು ದಿನಗಳ ಹಿಂದೆ ಅಮಿತ್ ಷಾರವರೇ ನಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ರೆಡ್ಡಿ ಸಹಕಾರ ಪಡೆಯುತ್ತೇವೆಂದು ಸ್ಪಷ್ಟಪಡಿಸಿದ್ದಾರೆ' ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಮಾತು ಮುಂದುವರೆಸಿ ಮಾತನಾಡಿದ ಬಿಎಸ್ವೈ ಅವರು 'ಜನಾರ್ಧನ ರೆಡ್ಡಿ ಅವರು ಅಭ್ಯರ್ಥಿಯಲ್ಲ, ಅಪೇಕ್ಷಿತರೂ ಅಲ್ಲ. ಆದರೆ ಅವರ ಸಹಕಾರ ಸಿಕ್ಕಿದರೆ ನಾವು ಎರಡು ಮೂರು ಜಿಲ್ಲೆಯಲ್ಲಿ ಗೆಲ್ಲಲು ಸಾಧ್ಯ, ಹೀಗಾಗಿ ಅವರ ಸಹಕಾರ ತೆಗೆದುಕೊಳ್ಳುತ್ತಿದ್ದೇವೆ' ಎಂದಿದ್ದಾರೆ.
ಕೆಲ ದಿನಗಳ ಹಿಂದೆ ರೆಡ್ಡಿಗೂ ಸಂಬಂಧ ಇಲ್ಲ ಎಂದು ಷಾ ಹೇಳಿದ್ಮೇಲೂ ರೆಡ್ಡಿ ಜೊತೆ ವೇದಿಕೆ ಹಂಚಿಕೊಂಡಿದ್ದ ಯಡ್ದಿಯೂರಪ್ಪ ಪಕ್ಷದ ಹೈಕಮಾಂಡ್ ಕೋಪಕ್ಕೆ ಗುರಿಯಾಗಿದ್ದರು. ಇದೀಗಾ ಅಮಿತ್ ಶಾ ಅವರೇ ರೆಡ್ಡಿ ಸಹಕಾರ ಪಡೆಯುತ್ತೇವೆಂದು ಹೇಳಿರುವುದಾಗಿ ಬಿಎಸ್ವೈ ಹೇಳಿಕೊಂಡಿದ್ದು, ಈ ಬಾರಿ ಅವರ ವಿರುದ್ಧ ಹೈಕಮಾಂಡ್ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ.