ಮಂಗಳೂರು, ಆ 28 (DaijiworldNews/PY): ಓಮನ್ ತುಳುವೆರ್ ಸಂಘಟನೆಯ ವತಿಯಿಂದ ಆ.27ರಂದು ಪತ್ರಿಕಾ ಭವನದಲ್ಲಿ ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಗದೀಶ್ ಪುತ್ತೂರು ಅವರು, ಓಮನ್ ತುಳುವೆರ್ ಅವರ ನಿರಂತರ ಪೋತ್ಸಾಹಕ್ಕಾಗಿ ಧನ್ಯವಾದಗಳು. ದಾಯ್ಜಿವಲ್ಡ್ ಟಿವಿಯಲ್ಲಿ ಮೂರು ಸಂಚಿಕೆಗಳಲ್ಲಿ ಪ್ರಸಾರವಾಗುವ ಗಾನಾ ಲೀಲೋತ್ಸವ ಕಾರ್ಯಕ್ರಮದ ಮೂಲಕ ಅವರು ನನಗೆ ಪ್ರೋತ್ಸಾಹ ನೀಡಿದ್ದಾರೆ. ಇಂತಹ ಪ್ರೋತ್ಸಾಹದ ಅಗತ್ಯವಿರುವ ಅನೇಕ ಗಾಯಕರಿದ್ದು, ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಲು ಇಂತಹ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಜಗದೀಶ್ ಪುತ್ತೂರು ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸನ್ಮಾನಿಸುತ್ತಿರುವುದು ಗಾಯನ ಕ್ಷೇತ್ರಕ್ಕೆ ನೀಡುವ ಗೌರವವಾಗಿದೆ ಎಂದು ನಿರ್ದೇಶಕ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಹೇಳಿದರು.
ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಉತತೇಜಿಸುವಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಕಾರ್ಯವನ್ನು ಓಮನ್ ತುಳುವೆರ್ ಮಾಡಿದೆ. ಅವರು ಜಗದೀಶ್ ಪುತ್ತೂರು ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೊಂದು ವೇದಿಕೆ ಕಲ್ಪಿಸಿದ್ದಾರೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ತಿಳಿಸಿದರು.
ಈ ವೇಳೆ, ನಿರ್ಮಾಪಕ ಕಿಶೋರ್.ಡಿ.ಶೆಟ್ಟಿ, ಸಂಗೀತ ನಿರ್ದೇಶಕ ಕಿಶೋರ್ ಹಾಗೂ ನಿರ್ಮಾಪಕ ಸಂದೇಶ್ ಬಂಗೇರಾ ಉಪಸ್ಥಿತರಿದ್ದರು.