ಕಾಸರಗೋಡು, ಆ. 27 (DaijiworldNews/SM): ಜಿಲ್ಲೆಯಲ್ಲಿ ಶುಕ್ರವಾರ 157 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 142 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ಉಳಿದಂತೆ ನಾಲ್ಕು ಮಂದಿ ಹೊರರಾಜ್ಯ, 8 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಶುಕ್ರವಾರದಂದು 198 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಓರ್ವ ಆರೋಗ್ಯ ಸಿಬ್ಬಂದಿಗೆ ಸೋಂಕು ತಗಲಿದೆ. ಸೋಂಕಿತರಲ್ಲಿ 7 ತಿಂಗಳ ಮಗು ಹಾಗೂ 3 ರಿಂದ ಹತ್ತು ವರ್ಷದೊಳಗಿನ 9 ಮಕ್ಕಳು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ 5484 ಮಂದಿ ನಿಗಾದಲ್ಲಿದ್ದು, 1093 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 4, 682 ಮಂದಿಗೆ ಸೋಂಕು ದ್ರಢಪಟ್ಟಿದ್ದು, 3,759 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 3406 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ವಿದೇಶದಿಂದ ಬಂದ 536 ಮಂದಿ ಹಾಗೂ ಹೊರರಾಜ್ಯಗಳಿಂದ ಬಂದ 387 ಮಂದಿಗೆ ಸೋಂಕು ದೃಢಪಟ್ಟಿದೆ.