ಕಾಸರಗೋಡು: ಆ. 25 (DaijiworldNews/SM): ಹೈಕೋರ್ಟ್ ಆದೇಶದ ಬಳಿಕ ಕಾಸರಗೋಡು ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದರಿಂದಾಗಿ ಗಡಿ ಭಾಗದ ಜನತೆಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ತುರ್ತು ಅಗತ್ಯಗಳಿಗೆ ತೆರಳುವವರಿಗೆ ಯಾವುದೇ ಪರೀಕ್ಷೆ ನಡೆಸುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಅಲ್ಲದೆ ಜಾಲ್ಸೂರು, ಪೆರ್ಲ, ಮಾಣಿಮೂಲೆ, ಬಂದಡ್ಕ ರಸ್ತೆಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ತುರ್ತು ಅಗತ್ಯಗಳಿಗೆ ತೆರಳುವವರಿಗೆ ಆಂಟಿಜನ್ ಟೆಸ್ಟ್ ಅಗತ್ಯ ಇಲ್ಲ ಎಂಬ ಆದೇಶ ನೀಡಿದೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಗಡಿ ಭಾಗದ ಜನತೆ ನಡೆಸುತ್ತಿದ್ದ ಹೋರಾಟಕ್ಕೆ ಒಂದು ಹಂತದಲ್ಲಿ ಗೆಲುವು ಸಿಕ್ಕಂತಾಗಿದೆ.
ಆಸ್ಪತ್ರೆ, ವ್ಯವಹಾರ, ತುರ್ತು ಅಗತ್ಯಕ್ಕೆ ತೆರಳುವರಿಗೆ ಅಂಟಿಜನ್ ಟೆಸ್ಟ್ ಬೇಡ ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಇನ್ನುಳಿದಂತೆ ದಿನಂಪ್ರತಿ ತೆರಳುವವರಿಗೆ 21 ದಿನಗಳಿಗೊಮ್ಮೆ ಅಂಟಿಜನ್ ಟೆಸ್ಟ್ ಮಾಡಬೇಕೆಂದು ತಿಳಿಸಿದೆ.