ಉಡುಪಿ, ಆ. 28 (DaijiworldNews/SM): ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11 ಸಾವಿರ ಗಡಿದಾಟಿದೆ. ಶುಕ್ರವಾರದಂದು ಜಿಲ್ಲೆಯಲ್ಲಿ ಮತ್ತೆ 174 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 11080ಕ್ಕೆ ಏರಿಕೆಯಾದಂತಾಗಿದೆ.

ಶುಕ್ರವಾರ ಪತ್ತೆಯಾದ ಸೋಂಕಿತರ ಪೈಕಿ 93 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೊಂಕು ದೃಢಪಟ್ಟಿದೆ. 58 ಐಎಲ್ ಐ ಪ್ರಕರಣಗಳಾಗಿವೆ. ನಾಲ್ವರಲ್ಲಿ ಸಾರಿ ಪ್ರಕರಣ ದೃಢಪಟ್ಟಿದೆ. 18 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಈ ನಡುವೆ ಇಂದು 187 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 2608 ಸಕ್ರೀಯ ಪ್ರಕರಣಗಳಿವೆ. ಇನ್ನು ಈ ನಡುವೆ ಜಿಲ್ಲೆಯಲ್ಲಿ ಕೊವಿಡ್ ಗೆ ಮತ್ತೆ ಇಬ್ಬರು ಬಲಿಯಾಗಿದ್ದಾರೆ. ಉಡುಪಿಯ 57 ವರ್ಷದ ಪುರುಷ ಮತ್ತು 66 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೊವಿಡ್ ಗೆ 95 ಮಂದಿ ಬಲಿಯಾದಂತಾಗಿದೆ.