ಮಂಗಳೂರು, ಆ. 28 (DaijiworldNews/SM): ರಸ್ತೆ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ಎಂಬಂತೆ ಎಲೆಕ್ಟ್ರಿಕ್ ವಾಹನಗಳು ಈಗಾಗಲೇ ರಸ್ತೆಗಿಳಿದಿವೆ. ಮಂಗಳೂರಿನಲ್ಲೂ ಎಲೆಕ್ಟ್ರಿಕ್ ವಾಹನಗಳ ಓಡಾಟ ಶುರುವಾಗಿದೆ. ಇದೀಗ ನಗರದ ಹೊರ ವಲಯದ ಅಡ್ಯಾರ್ ಸಹ್ಯಾದ್ರಿ ಕಾಲೇಜು ಸಮೀಪದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದೆ. ಟ್ರಿನಿಟಿ ಕಾಂಪ್ಲೆಕ್ಸ್ ನಲ್ಲಿ ಪಂಡಿತ್ಸ್ ಎಲೆಕ್ಟ್ರಿಕಲ್ ವೆಹಿಕಲ್ಸ್ ಶೋರೂಂ ಲೋಕಾರ್ಪಣೆಗೊಂಡಿದೆ.






ಆ ಮೂಲಕ ಮಂಗಳೂರಿನಲ್ಲಿ ವಿನೂತನ ಪ್ರಯೋಗಕ್ಕೆ ಶೋ ರೂಂ ಮಾಲಕರು ಮುಂದಾಗಿದ್ದು, ವಿದ್ಯುತ್ ಚಾಲಿತ ದ್ವಿ ಚಕ್ರ ವಾಹನಗಳು ಈ ಮಳಿಗೆಯಲ್ಲಿ ಲಭ್ಯವಿದೆ. ಪೆಟ್ರೋಲ್, ಡೀಸೆಲ್ ದರ ನಿತ್ಯ ನಿರಂತರ ಎಂಬಂತೆ ಹೆಚ್ಚಳವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಎರಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಎಲೆಕ್ಟ್ರಿಕ್ ಮಳಿಗೆಯ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಿದ್ದು, ವಾಹನ ಸವಾರರನ್ನು ಮಿತ ಇಂಧನ ಬಳಕೆಯತ್ತ ಆಕರ್ಷಿಸುತ್ತಿದೆ.
ಇನ್ನು ವೈಶಿಷ್ಟ್ಯ ಎಂದರೆ, ವಿದ್ಯುತ್ ಚಾಲಿತ ವಾಹನಕ್ಕೆ ಯಾವುದೇ ರಿಜಿಸ್ಟ್ರೇಶನ್ ಅಗತ್ಯವಿಲ್ಲ. ಲೈಸೆನ್ಸ್ ಕೂಡ ಅಗತ್ಯವಿಲ್ಲ. ವಾಹನದ ಇನ್ಶೂರೆನ್ಸ್ ಹಾಗೂ ರೋಡ್ ಟ್ಯಾಕ್ಸ್ ಇರುವುದಿಲ್ಲ. ಸುಲಭ ಮಾಸಿಕ ಕಂತಿನ ಸೌಲಭ್ಯದಲ್ಲಿ ಶೋ ರೂಂನಲ್ಲಿ ಗ್ರಾಹಕರಿಗೆ ವಾಹನ ಲಭ್ಯವಾಗಲಿದೆ. ಅದರ ಜೊತೆಯಲ್ಲಿ ಗ್ರಾಹಕರಿಗೆ 100% ಕ್ಯಾಶ್ ಬ್ಯಾಕ್ ಆಫರ್ ನ್ನು ಕೂಡ ನೂತನ ಪಂಡಿತ್ಸ್ ಶೋ ರೂಂ ನೀಡಿದೆ.
ಇನ್ನು ನೂತನ ಮಳಿಗೆಯ ಲೋಕಾರ್ಪಣೆಯ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಯು.ಟಿ. ಖಾದರ್, ಪ್ರದೀಪ್ ಶೆಟ್ಟಿ, ಶೋರೂಂ ಮಾಲಕ ಅನಿಲ್ ಪಂಡಿತ್, ಚಂದ್ರಹಾಸ್ ಪಂಡಿತ್, ಮಳಿಗೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಧಾಕರ್ ಬಾಬು, ಸತೀಶ್ ಶೆಟ್ಟಿ, ಪ್ರಮೋಟರ್ ಜಯಕುಮಾರ್, ಸುರೇಶ್ ಶೆಟ್ಟಿ, ಪದ್ಮರಾಜ್ ಮೊಯ್ಲಿ ಮತ್ತಿತರರು ಭಾಗಿಯಾಗಿದ್ದರು.