ಮಂಗಳೂರು, ಆ 29 (DaijiworldNews/PY): ಮೊಬೈಲ್ ಅಂಗಡಿಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ಓರ್ವ ಯುವಕ ಗಾಯಗೊಂಡ ಘಟನೆ ನಗರದ ನೆಲ್ಲಿಕಾಯಿ ರಸ್ತೆಯ ರಾವ್ ಸರ್ಕಲ್ ಬಳಿಯಲ್ಲಿ ಆ.29ರ ಶನಿವಾರದಂದು ನಡೆದಿದೆ.



ಗಾಯಗೊಂಡ ಯುವಕನನ್ನು ಸಂಶುದ್ದೀನ್ (26) ಎಂದು ಗುರುತಿಸಲಾಗಿದೆ.
ಸಂಶುದ್ದೀನ್ ಅವರು ಮೊಬೈಲ್ ಅಂಗಡಿಯನ್ನು ವಿಸ್ತರಿಸುವ ಸಲುವಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶೀಟ್ ಸಮೇತ ಗೋಡೆ ಕೂಡಾ ಕುಸಿದಿದೆ.
ಗೋಡೆ ಕುಸಿದ ಪರಿಣಾಮ ಸಂಶುದ್ದೀನ್ ಅವರಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.