ಬೆಳ್ತಂಗಡಿ, ಆ 29 (DaijiworldNews/PY): ಕುರಿ ಮೇಯಿಸುತ್ತಿದ್ದ ಯುವತಿಯ ಮೇಲೆ ಯುವಕನೋರ್ವ ಅತ್ಯಾಚಾರಕ್ಕೆ ಯತ್ನಸಿದ ಘಟನೆ ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ನಡೆದಿದ್ದು, ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಸಾದಿಕ್ ಎನ್ನಲಾಗಿದೆ.
ಯುವತಿಯು ನಿನ್ನಿಕಲ್ಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಳು. ಈ ವೇಳೆ ಸಾದಿಕ್ ಆಕೆಯ ಕೈ ಎಳೆದು ಬಲತ್ಕಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಿಕೊಂಡಿದ್ದು, ಆಕೆಯ ಸಹೋದರ ಅಲ್ಲಿಗೆ ಧಾವಿಸಿದ್ದು, ಆತ ಸಾದಿಕ್ಗೆ ಥಳಿಸಿದ್ದಾನೆ. ಬಳಿಕ ವಿಷಯವನ್ನು ಸ್ಥಳೀಯರಿಗೆ ತಿಳಿಸಿದ್ದಾನೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.