ಮಂಗಳೂರು, ಆ. 29 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 272 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12109 ಕ್ಕೆ ಏರಿಕೆಯಾಗಿದೆ.

ಇಂದು ಮಂಗಳೂರಿನಲ್ಲಿ 163, ಬಂಟ್ವಾಳದಲ್ಲಿ 30, ಪುತ್ತೂರಿನಲ್ಲಿ 33, ಸುಳ್ಯದಲ್ಲಿ 23, ಬೆಳ್ತಂಗಡಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 12 ಮಂದಿಗೆ ಪಾಸಿಟಿವ್ ಆಗಿದೆ.
ಇನ್ನು ಜಿಲ್ಲೆಯಲ್ಲಿ ಇಂದು 236 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9209 ಕ್ಕೆ ಏರಿದೆ.
ಜಿಲ್ಲೆಯಲ್ಲಿ ಏಳು ಮಂದಿ ಸೋಂಕಿತರು ಸಾವನ್ನಪ್ಪಿದ್ದು ಈ ಪೈಕಿ ಒಬ್ಬರು ಮಂಗಳೂರಿನವರಾಗಿದ್ದು, ನಾಲ್ವರು ಪುತ್ತೂರಿನವಾದರೆ ಮತ್ತಿಬ್ಬರು ಇತರ ಜಿಲ್ಲೆಯವರಾಗಿದ್ದಾರೆ. ಈವರೆಗೆ 350 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಶನಿವಾರ 101 ಐಎಲ್ಎ, 15 ಎಸ್ಎಆರ್ಐ ಪ್ರಕರಣಗಳಾಗಿದ್ದು 43 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. ಇನ್ನು 110 ಮಂದಿಗೆ ಸೋಂಕು ತಗುಲಿರುವ ಸಂಪರ್ಕದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಮೂವರಿಗೆ ವಿದೇಶ ಪ್ರಯಾಣದ ಇತಿಹಾಸವಿದೆ.
ಇನ್ನು ಇಂದು ದೃಢಪಟ್ಟ 272 ಸೋಂಕಿತರ ಪೈಕಿ 127 ಮಂದಿಯಲ್ಲಿ ರೋಗದ ಗುಣಲಕ್ಷಣಗಳಿದ್ದು 145 ಮಂದಿಯಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲ. ಹಾಗೆಯೇ ಪ್ರಸ್ತುತ 2550 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.