ಕಾಸರಗೋಡು, ಆ. 29 (DaijiworldNews/MB) : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದು ಸಾವಿರದತ್ತ ಸಾಗುತ್ತಿದೆ. ಶನಿವಾರ 198 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 4880 ಕ್ಕೆ ತಲುಪಿದೆ.

3948 ಮಂದಿಗೆ ಸಂಪರ್ಕದಿಂದ ಇದುವರೆಗೆ ಸೋಂಕು ತಗಲಿದೆ. ಶನಿವಾರ 188 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ವಿದೇಶ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ ತಲಾ ಐವರಿಗೆ ಸೋಂಕು ದೃಢಪಟ್ಟಿದೆ. ಐವರು ಆರೋಗ್ಯ ಸಿಬಂದಿಗಳಿಗೆ ಸೋಂಕು ತಗಲಿದೆ. 47 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದ್ದಾರೆ.
ಅಜಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 19 , ಕಾಸರಗೋಡು ಮತ್ತು ಕಾಞಂಗಾಡ್ ನಗರಸಭಾ ವ್ಯಾಪ್ತಿಯಲ್ಲಿ ತಲಾ 12, ಮಧೂರು 18 , ಪಳ್ಳಿಕೆರೆ 9, ಮುಳಿಯಾರು , ಚೆಂಗಳ , ವಳಿಯಪರಂಬ ತಲಾ 6, ಕೊಡೋ ಬೇಳೂರು 10, ಪೈವಳಿಕೆ, ಪಿಲಿಕ್ಕೋಡ್, ಕುತ್ತಿಕೋಲ್, ಎಣ್ಮಕಜೆ, ಉದುಮ, ಮಡಿಕೈ ತಲಾ 1, ಕುಂಬಳೆ 12, ಚೆಮ್ನಾಡ್ 30, ದೇಲಂಪಾಡಿ , ಮಂಗಲ್ಪಾಡಿ 5, ಪುತ್ತಿಗೆ, ಮಂಜೇಶ್ವರ, ಚೆರ್ವತ್ತೂರು, ಕಿನಾನೂರು ಕರಿಂದಳ, ನೀಲೇಶ್ವರ ತಲಾ 2, ತ್ರಿಕ್ಕರಿಪುರ, ಬದಿಯಡ್ಕ ತಲಾ 3, ಕಯ್ಯೂ ರು ಚಿಮೇನಿ, ಕಳ್ಳಾರ್ ತಲಾ ನಾಲ್ವರಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 5598 ಮಂದಿ ನಿಗಾದಲ್ಲಿದ್ದು , 1025 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.