ಪುತ್ತೂರು, ಆ. 30(DaijiworldNews/HR): ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಒಟ್ಟು 27 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಪುತ್ತೂರು ತಾಲೂಕಿನ ಸರ್ವೆ ನಿವಾಸಿಗಳಾದ 23 ವರ್ಷದ ಯುವಕ, 57 ವರ್ಷದ ಪುರುಷ ಮತ್ತು 38 ವರ್ಷದ ಮಹಿಳೆ, ನರಿಮೊಗ್ರು ಗ್ರಾಮದ ನಿವಾಸಿ 34 ವರ್ಷದ ಪುರುಷ, ಆರ್ಯಾಪು ಗ್ರಾಮದ ನಿವಾಸಿ 28 ವರ್ಷದ ಪುರುಷ, ಕೆಯ್ಯೂರು ಗ್ರಾಮದ ನಿವಾಸಿ 58 ವರ್ಷದ ಪುರುಷ, ಮುಂಡೂರು ಗ್ರಾಮದ ನಿವಾಸಿಗಳಾದ 24 ವರ್ಷದ ಯುವತಿ ಮತ್ತು 6 ವರ್ಷದ ಬಾಲಕಿ , ಹಿರೇಬಂಡಾಡಿ ಗ್ರಾಮದ ನಿವಾಸಿ 20 ವರ್ಷದ ಯುವತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಇನ್ನು ಪುತ್ತೂರು ನಗರಸಭಾ ವ್ಯಾಪ್ತಿಯ ಬನ್ನೂರು ನಿವಾಸಿಗಳಾದ 36 ವರ್ಷದ ಮಹಿಳೆ ಮತ್ತು 70 ವರ್ಷದ ಮಹಿಳೆ, ತೆಂಕಿಲ ನಿವಾಸಿ 80 ವರ್ಷದ ವೃದ್ಧೆ, ಕೋರ್ಟು ರಸ್ತೆ ನಿವಾಸಿ 60 ವರ್ಷದ ಪುರುಷ, ಪಡೀಲು ನಿವಾಸಿ 26 ವರ್ಷದ ಮಹಿಳೆನಗರ ಪೊಲೀಸ್ ವಸತಿ ಗೃಹದ 56 ವರ್ಷದ ಪುರುಷ, ನೆಹರೂನಗರ ನಿವಾಸಿಗಳಾದ 45 ವರ್ಷದ ಪುರುಷ, 48 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆ, ದರ್ಬೆ ನಿವಾಸಿಗಳಾದ 48 ವರ್ಷದ ಪುರುಷ ಮತ್ತು 24 ವರ್ಷದ ಪುರುಷ, ಸಂಜಯನಗರ ನಿವಾಸಿ 21 ವರ್ಷದ ಯುವತಿ, ಕೆಮ್ಮಾಯಿ ನಿವಾಸಿ 77 ವರ್ಷದ ಪುರುಷರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಇನ್ನು ಕಡಬ ತಾಲೂಕಿನ ರಾಮಕುಂಜ ಗ್ರಾಮದ ನಿವಾಸಿಗಳಾದ 27 ವರ್ಷದ ಮಹಿಳೆ ಮತ್ತು 3 ವರ್ಷದ ಹೆಣ್ಣು ಮಗು, ಕೊಣಾಳು ನಿವಾಸಿಗಳಾದ 45 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆ ಹಾಗೂ ನೂಜಿಬಾಳ್ತಿಲ ಗ್ರಾಮದ 21 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.