ಮಂಗಳೂರು, ಆ. 30 (DaijiworldNews/MB) : ಖ್ಯಾತ ಕೊಂಕಣಿ ಬರಹಗಾರ, ಸಂಶೋಧಕ ಮತ್ತು ಸಮಾಜ ಸೇವಕ ಪೌಲ್ ಮೋರಾಸ್ ಅವರು ಆಗಸ್ಟ್ 30 ರ ಭಾನುವಾರ ನಿಧನರಾದರು.

68 ವರ್ಷದ ಅವರು, ಏಪ್ರಿಲ್ 28, 1952 ರಂದು ಜನಿಸಿದ್ದು ಕಳೆದ ಮೂರು ದಶಕಗಳಿಂದ ಕೊಂಕಣಿ ಸಮುದಾಯಕ್ಕೆ ಸೇವೆ ಸಲ್ಲಿಸಿದ್ದಾರೆ.
ಅವರು ಕೊಂಕಣಿ ಸಂಶೋಧನಾ ಸಂಪುಟಗಳನ್ನು ಮತ್ತು ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು ಅವರ ಪುಸ್ತಕಗಳನ್ನು ಗೋವಾ ಮತ್ತು ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆ ಮಾಡಲಾಗಿದೆ.
ಕೊಂಕಣಿ ಸಾಹಿತ್ಯಕ್ಕೆ ತಮ್ಮದೇ ಆದ ಉಡುಗೊರೆ ನೀಡಿರುವ ಅವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಸಾಹಿತ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
'ಕೊಂಕಣಿ ಚಳ್ವಳ್, 'ಜಾಗರಣ್', 'ಮೊಗ್ರೆ-ಕರಣ್', 'ಖೇಲ್-ರಾಜನ್ವ್' ಅವರ ಕೆಲವು ಕೃತಿಗಳಾಗಿದ್ದು ಅವರ ಕೊಂಕಣಿ ಚಳ್ವಳ್ ಕೃತಿಗಾಗಿ ಅವರು ಡಾ ಟಿ ಎಂ ಎ ಪೈ ಫೌಂಡೇಶನ್ನ ಅತ್ಯುತ್ತಮ ಕೊಂಕಣಿ ಪುಸ್ತಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. 'ಮಹನ್ ಕೊಂಕಣಿ ಕರ್ಬಾರಿ' ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ಕ್ರಿಯೆ ಆಗಸ್ಟ್ 31 ರ ಸೋಮವಾರ ನಡೆಯಲಿದೆ ಎಂದು ತಿಳಿದು ಬಂದಿದೆ.