ಬಂಟ್ವಾಳ, ಆ 30 (DaijiworldNews/PY): ಗೋಡೆಯ ಇಟ್ಟಿಗೆ ಕುಸಿದ ಪರಿಣಾಮ ಯುವಕನೋರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಅಮ್ಮುಂಜೆ ಗ್ರಾಮದ ಮಾದುಕೋಡಿಯಲ್ಲಿ ಭಾನುವಾರ ನಡೆದಿದೆ.






ಮೃತಪಟ್ಟ ವ್ಯಕ್ತಿ ಶಂಭೂರು ನಿವಾಸಿ ಜನಾರ್ದನ(38) ಎಂದು ತಿಳಿದುಬಂದಿದೆ.
ಜನಾರ್ದನ ಅವರು ಭಾನುವಾರದಂದು ಮಾದುಕೋಡಿಯಲ್ಲಿ ನಡೆಯುತ್ತಿದ್ದ ಶ್ರಮದಾನದಲ್ಲಿ ಭಾಗಹಿಸಲೆಂದು ಬಂದಿದ್ದರು. ಈ ಸಂದರ್ಭ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.