ಉಳ್ಳಾಲ, ಸೆ23: ಮಂಗಳೂರಿನ ಕಾಂಗ್ರೇಸ್ ಕಾರ್ಯಕರ್ತರು ಕಾಂಗ್ರೇಸ್ ನ ಶಕ್ತಿ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ಹೇಳಿದರು.
ಅಸೈಗೋಳಿ ಕೇಂದ್ರ ಮೈದಾನದಲ್ಲಿ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೇಸ್ ಸಮಿತಿಯ ಜಂಟಿ ಆಶ್ರಯದಲ್ಲಿ ನಡೆದ ಬೃಹತ್ ಸಮಾವೇಶ ಸಾಮರಸ್ಯ ಸಂಘಟನೆ ಅಭಿವೃದ್ದಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರದ ನೀತಿಯಿಂದಾಗಿ ದೇಶದ ಆರ್ಥಿಕ ಸ್ಥಿತಿ ಕುಸಿದಿದ್ದು, ಜಿಡಿಪಿ 9 ರಿಂದ 5.7ಕ್ಕೆ ಇಳಿದಿದೆ. ನಮ್ಮ ದೇಶದ ಪ್ರಧಾನಿ "ಸುಳ್ಳಿನ ಸರದಾರ". ಕೇಂದ್ರದ ಡೋಂಗಿ ಸರಕಾರ ಕಿತ್ತೊಗೆಯಲು ನೀವು ಸಿದ್ಧರಾಗಿ ಎಂದರು.
ಸಮಾವೇಶದಲ್ಲಿ ಕೆಪಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಪಾಲ್ಗೊಂಡಿದ್ದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.