ಕಾರ್ಕಳ, ಆ. 30 (DaijiworldNews/SM): ಕೊರೋನಾ ವಾರಿಯರ್ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ನಗರದ ಸತ್ಯನಾರಾಯಣ ನಗರದಲ್ಲಿ ನಡೆದಿದೆ. ಪತ್ತೊಂಜಿಕಟ್ಟೆಯ ಚಂದ್ರಶೇಖರ್(50) ಎಂಬವರು ಹಲ್ಲೆಗೊಳಗಾದವರು.

ಪುರಸಭೆಯಲ್ಲಿ ಕರವಸೂಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ್ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ಕಳ ಮುಖ್ಯಾಧಿಕಾರಿ ರೇಖಾ ಶೆಟ್ಟಿಯವರ ಆದೇಶದ ಮೇರೆಗೆ ಪುರಸಭಾ ವ್ಯಾಪ್ತಿಯಲ್ಲಿ ಕೋವಿಡ್ -19 ಕ್ವಾರಂಟೈನ್ ವಾಚ್ ಆಪ್ ನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ, ಹೊರರಾಜ್ಯದಿಂದ ಬಂದ ಸಾರ್ವಜನಿಕರು ಮತ್ತು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೋಂ ಕ್ವಾರಂಟೈನ್ ಮನೆಗಳಿಗೆ ದಿನಂಪ್ರತಿ ಭೇಟಿ ನೀಡಿ ಫೋಟೋಗಳನ್ನು ತೆಗೆದು ಆಪ್ಲೋಡ್ ಮಾಡುತ್ತಿದ್ದರು.
ಆಗಸ್ಟ್ 30ರಂದು ಬೆಳಿಗ್ಗೆ ಸುಮಾರು 9:3ಕ್ಕೆ ಕಾರ್ಕಳ ಪುರಸಭಾ ವ್ಯಾಪ್ತಿಯ ಸತ್ಯನಾರಾಯಣ ನಗರದ ಕ್ವಾರಂಟೈನ್ನಲ್ಲಿರುವ ಪ್ರಶಾಂತ್ ದೇವಾಡಿಗ, ನಿರ್ಮಲ ಮತ್ತು ಲಕ್ಷ್ಮೀ ದೇವಾಡಿಗ ಎಂಬವರ ಮನೆಗೆ ಹೋದಾಗ, ಆಪಾದಿತ ಪ್ರಶಾಂತ್ ದೇವಾಡಿಗ ತೀವ್ರ ಅಕ್ಷೇಪ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆನ್ನಲಾಗಿದೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.