ಉಡುಪಿ, ಆ. 30 (DaijiworldNews/SM): ಜಿಲ್ಲೆಯಲ್ಲಿ ಇಂದು ಮತ್ತೆ 254 ಮಂದಿಗೆ ಸೊಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಪತ್ತೆಯಾದ ಒಟ್ಟು ಸೋಂಕಿತರ ಸಂಖ್ಯೆ 11506 ಕ್ಕೆ ಏರಿಕೆಯಾಗಿದೆ. ಈ ಪೈಕಿ ಪ್ರಾಥಮಿಕ ಸಂಪರ್ಕದಿಂದ 107 ಮಂದಿಗೆ ಸೊಂಕು ದೃಢಪಟ್ಟಿದೆ.

92 ಮಂದಿಯಲ್ಲಿ ಐಎಲ್ಐ ಪ್ರಕರಣ ವರದಿಯಾಗಿದೆ. ನಾಲ್ವರಲ್ಲಿ ಸಾರಿ ಪ್ರಕರಣವಾಗಿದ್ದು, 47 ಮಂದಿಯ ಸಂಪರ್ಕ ಪತ್ತೆ ಹಚ್ಚುವ ಕಾರ್ಯ ಮುಂದುವರೆಸಲಾಗಿದೆ. ಇನ್ನು ನಾಲ್ವರು ಅಂತರ್ ರಾಜ್ಯ ಪ್ರಯಾಣ ಮುಗಿಸಿ ಬಂದವರಲ್ಲಿ ಸೊಂಕು ದೃಢಪಟ್ಟಿದೆ.
ರವಿವಾರದಂದು ಜಿಲ್ಲೆಯಲ್ಲಿ 195 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 2620 ಸಕ್ರಿಯ ಪ್ರಕರಣಗಳಿವೆ.