ಪುತ್ತೂರು, ಆ. 31 (DaijiworldNews/MB) : ಪುತ್ತೂರಿನ ನರಿಮೊಗರು ಶಾಲಾ ಬಳಿ ಭಾನುವಾರ ರಾತ್ರಿ ಕಾರು ಮತ್ತು ಬೈಕ್ ನಡುವೆ ಉಂಟಾದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ.


ಮೃತರನ್ನು ಕುರಿಯ ಇಡಬೆಟ್ಟು ನಿವಾಸಿಗಳಾದ ಕಟ್ಟತಬೈಲು ಐತ್ತಪ್ಪ ಎಂಬವರ ಪುತ್ರ ಮಿಥುನ್ ಮತ್ತು ಉಮೇಶ್ ಎಂಬವರ ಪುತ್ರ ಭವಿತ್ ಎಂದು ಗುರುತಿಸಲಾಗಿದೆ.
ನರಿಮೊಗರು ಶಾಲೆಯ ಬಳಿ ಭಾನುವಾರ ರಾತ್ರಿ ನಡೆದ ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯ ಮಧ್ಯೆ ಬಿದ್ದಿದ್ದ ಸವಾರರಿಬ್ಬರನ್ನು ಅದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಗಮನಿಸಿ ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಬ್ಬರು ಕೂಡಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.