ಉಡುಪಿ, ಸೆ. 01 (DaijiworldNews/MB) : ಉಡುಪಿ ಬೆಳ್ಳಂಪಳ್ಳಿಯ ಸ್ವರ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗಡೆ. ಆಗಸ್ಟ್ 31 ಸೋಮವಾರ ರಾತ್ರಿ ಸುಮಾರು 8:00 ಗಂಟೆಯ ಹೊತ್ತಿಗೆಗಾಳ ಹಾಕುವ ಹವ್ಯಾಸಿ ಸ್ಥಳೀಯ ಮೀನುಗಾರರಿಗೆ ಸೇತುವೆ ಕೆಳಗಡೆ ನಿನ್ನೆ ರಾತ್ರಿ ನೀರಿನಲ್ಲಿ ಪಳಪಳಹೊಳೆಯುತ್ತಿರುವುದನ್ನುದನ್ನು ಗಮನಿಸಿದ ಸ್ಥಳೀಯರಾದ ಪುರಂದರ ಕೋಟ್ಯಾನ್ ರಾಕೇಶ್, ನಿಶಾನ್, ರಿತಿಕ್, ನವೀನ್ , ಆತ್ರಾಡಿ ದಿನೇಶ್ ಪೂಜಾರಿ ಮತ್ತು ಅವರ ತಂಡ ಹವ್ಯಾಸಿ ಗಾಳ ಹಾಕೊ ಮಿನುಗಾರರು ತಟ್ಟನೆ ಸ್ವರ್ಣ ನದಿಗೆ ಜಿಗಿದು ವಿಗ್ರಹವನ್ನು ಮೇಲೆತ್ತಿದಾಗ ಎತ್ತಿದಾಗ ಕೊಳಲನೂದುವ ಗೋಪಾಲಕೃಷ್ಣನ ಪಂಚಲೋಹದವಿಗ್ರಹ ಕಂಡುಬಂದಿದೆ.

ಸುಮಾರು ಈ ವಿಗ್ರಹ ಎಂಟು ಕೆ,ಜಿ ಯಷ್ಟು ಬಾರಹೊಂದಿದ್ದು ಸ್ಥಳೀಯ ಮುಖಂಡರಾದ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ತಿಳಿಸಿದ್ದಾರೆ. ಇದೀಗ ಈ ವಿಗ್ರಹವನ್ನು ಹಿರಿಯಡ್ಕ ಠಾಣೆಗೆ ಒಪ್ಪಿಸಿರುತ್ತಾರೆ.. ಮುಂದಿನ ತನಿಖೆ ನಡೆಯಲಿದೆಯೆಂದು ಪ್ರವೀಣ್ ಶೆಟ್ಟಿಯವರು ತಿಳಿಸಿದ್ದಾರೆ.
"ಸಾಮಾನ್ಯವಾಗಿ ಈ ರೀತಿ ವಿನ್ಯಾಸದ ಮೂರ್ತಿ ಗಳನ್ನು ದೇವಸ್ಥಾನದಲ್ಲಿ ಪೂಜಿಸುವುದು ಕಡಿಮೆ, ಆದರೆ ಮನೆಯಲ್ಲಿ ಅಲಂಕಾರಿಕವಾಗಿ ಇಡುತ್ತಾರೆ. ಇಲ್ಲದಿದ್ದರೆ, ಯಾರೋ ಕಳ್ಳರು ಕದ್ದು ಇಲ್ಲಿ ಬಚ್ಚಿಟ್ಟಿರುವ ಸಾಧ್ಯತೆ ಇರಬಹುದು ಎಂದು ಅಲ್ಲಿನ ಸ್ಥಳೀಯರು ತಿಳಿಸಿದ್ದಾರೆ.