ಕಾಸರಗೋಡು, ಸೆ.1(DaijiworldNews/HR): ಟಯರ್ ವರ್ಕ್ಸ್ ಮಳಿಗೆಗೆ ನುಗ್ಗಿದ್ದ ಕಳ್ಳರು ನಗದು ಕಳವು ಮಾಡಿದ ಘಟನೆ ಮಂಜೇಶ್ವರದ ಉದ್ಯಾವರ ಮಾಡ ಎಂಬಲ್ಲಿ ನಡೆದಿದೆ.


ಉದ್ಯಾವರ ಕುಂಡುಕೊಳಕೆಯ ನಿವಾಸಿಯಾದ ದಿನೇಶ್ ಎಂಬವರ ಮಾಲಕತ್ವದ ಮಳಿಗೆಯ ಶಟರ್ ನ ಬೀಗ ಮುರಿದು ಕಳ್ಳತನ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಯು ಸೋಮವಾರ ರಾತ್ರಿ ನಡೇದಿದ್ದು, ಮೇಜಿನ ಡ್ರವರ್ ನಲ್ಲಿದ್ದ 30 ಸಾವಿರ ರೂ . ನಗದು ಕಳವು ಮಾಡಲಾಗಿದೆ.
ಅಂಗಡಿ ಮಾಲಕ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.