ಕಾಸರಗೋಡು, ಸೆ. 01 (DaijiworldNews/SM): ಜಿಲ್ಲೆಯಲ್ಲಿ ಎರಡು ತಿಂಗಳ ಬಳಿಕ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆ ಕಂಡಿದ್ದು, ಮಂಗಳವಾರ 15 ಮಂದಿಗೆ ಕೊರೋನಾ ಸೋಂಕು ದ್ರಢಪಟ್ಟಿದೆ.

15 ಮಂದಿಗೂ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ನಡುವೆ ಇಂದು 90 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗೆಡೆ ಗೊಂಡಿದ್ದಾರೆ.
1403 ಮಂದಿ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 5157 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ 38 ಮಂದಿ ಮೃತಪಟ್ಟಿದ್ದಾರೆ. 3716 ಮಂದಿ ಗುಣಮುಖರಾಗಿದ್ದಾರೆ.
ಮಂಗಳವಾರ ದೃಢಪಟ್ಟ ಸೋಂಕಿತರಲ್ಲಿ ಮಂಗಲ್ಪಾಡಿ, ಕುಂಬಳೆ, ಮಧೂರಿನ ತಲಾ ಮೂವರು, ಪಳ್ಳಿಕೆರೆ, ಎಣ್ಮಕಜೆ, ತ್ರಿಕ್ಕರಿಪುರ, ಅಜಾನೂರು, ಮುಳಿಯಾರು, ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 6386 ಮಂದಿ ನಿಗಾದಲ್ಲಿದ್ದು, 1069 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.