ಮಂಗಳೂರು, ಸೆ. 01 (DaijiworldNews/SM): ದ.ಕ ಜಿಲ್ಲೆಯಲ್ಲಿ ಮಂಗಳವಾರದಂದು 352 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ನಡುವೆ ಗುಣಮುಖರಾಗುವವರ ಸಂಖ್ಯೆಯೂ ಕೂಡ ಉತ್ತಮವಾಗಿದೆ. ಮಂಗಳವಾರದಂದು ಮತ್ತೆ 363 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ 51 ಮಂದಿಗೆ ಸಂಪರ್ಕದಿಂದ ಕೊರೋನಾ ದೃಢಪಟ್ಟಿದೆ. 136 ಮಂಡಿಯಲ್ಲಿ ಐಎಲ್ ಐ, 17 ಮಂದಿಯಲ್ಲಿ ಸಾರಿ ಕೇಸ್ ಪತ್ತೆಯಾಗಿದೆ. 148 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಕೊರೋನಾ ಸೋಂಕಿಗೆ ಮಂಗಳವಾರ ಮತ್ತೆ 7 ಮಂದಿ ಸಾವನ್ನಪ್ಪಿದ್ದಾರೆ.
ಇಂದಿನ ಸೋಂಕಿತರ ಮೂಲಕ ದ.ಕ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13,065ಕ್ಕೆ ಏರಿಕೆಯಾಗಿದೆ. ಇಂದಿನ ತನಕ ದ.ಕ. ಜಿಲ್ಲೆಯಲ್ಲಿ 10,152 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ದ.ಕ. ಜಿಲ್ಲೆಯಲ್ಲಿ 2538 ಸಕ್ರಿಯ ಕೊರೊನಾ ಕೇಸ್ ಗಳಿವೆ. ಇನ್ನು ಜಿಲ್ಲೆಯಲ್ಲಿ ಈವರೆಗೆ 375 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.