ವಿಟ್ಲ, ಸೆ. 01 (DaijiworldNews/SM): ಯುವಕನೊಬ್ಬನ ಮನೆಯಲ್ಲಿ ಇಬ್ಬರು ಯುವತಿಯರು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಾತುಕತೆ ನಡೆಸಿ ಯುವತಿಯನ್ನು ಮಂಗಳೂರು ಪ್ರಜ್ಞಾ ಕೇಂದ್ರಕ್ಕೆ ಒಪ್ಪಿಸಲಾಗಿದೆ.

ಮನೆಯಲ್ಲಿ ಯುವತಿ ಇರುವ ಬಗ್ಗೆ ಮಾಹಿತಿ ಪಡೆದ ಸಂಘಟನೆ ಕಾರ್ಯಕರ್ತರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಮನೆಗೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದ್ದರು.
ಆದರೆ, ಇಲ್ಲಿ ಯುವತಿ ಯಾವುದೇ ದೂರು ನೀಡದ ಹಿನ್ನೆಲೆಯಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ. ಯುವಕನಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಯುವತಿ ಯುವಕನ ಮೇಲೆ ಯಾವುದೇ ದೂರು ನೀಡದ ಹಿನ್ನೆಲೆಯಲ್ಲಿ ಪ್ರಕರಣ ಸುಖಾಂತ್ಯಗೊಂಡಿದೆ. ಬಳಿಕ ಯುವತಿಯನ್ನು ಪೊಲೀಸರು ಮಂಗಳೂರು ಪ್ರಜ್ಞಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.