ಉಡುಪಿ, ಸೆ. 01 (DaijiworldNews/SM): ಜಿಲ್ಲೆಯಲ್ಲಿ ಮಂಗಳವಾರದಂದು ಮತ್ತೆ 161 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11750 ಕ್ಕೆ ಏರಿಕೆಯಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಮಂಗಳವಾರ ಮತ್ತೆ 250 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಇಂದು ಪತ್ತೆಯಾದ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 43 ಮಂದಿಗೆ ಸೊಂಕು ದೃಢಪಟ್ಟಿದೆ. 81 ಐಎಲ್ಐ ಪ್ರಕರಣಗಳಾಗಿದ್ದು, 3 ಸಾರಿ ಪ್ರಕರಣಗಳಾಗಿವೆ. 8 ಮಂದಿಗೆ ಅಂತರ್ ರಾಜ್ಯ ಪ್ರಯಾಣದಿಂದ ಸೊಂಕು ಪತ್ತೆಯಾಗಿದೆ. ಇನ್ನೂ 26 ಮಂದಿಯ ಸೊಂಕಿನ ಮೂಲ ಪತ್ತೆಯಾಗಿಲ್ಲ.
ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಕೊರೊನಾಗೆ ೨ ಸಾವನ್ನಪ್ಪಿದ್ದಾರೆ. ಉಡುಪಿಯ 78 ವರ್ಷದ ಮಹಿಳೆ ಕೊರೊನಾಗೆ ಸಾವನ್ನಪ್ಪಿದ್ದು, ಕಾರ್ಕಳದ 53 ವರ್ಷದ ವ್ಯಕ್ತಿ ಸೋಂಕಿನಿಂಡಾಗಿ ಮೃತಪಟ್ಟಿದ್ದಾರೆ. ಆ ಮೂಲಕ ಉಡುಪಿಯಲ್ಲಿ ಈವರೆಗೆ 99 ಮಂದಿ ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2307 ಸಕ್ರಿಯ ಪ್ರಕರಣಗಳಿವೆ.