ಮೂಡುಬಿದಿರೆ, ಸೆ. 02 (DaijiworldNews/MB) : ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಮೂಡಬಿದಿರೆ ಬಳಿಯ ಬಡಗ ಮಿಜಾರು ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಮೃತ ಯುವಕನನ್ನು ಮೂಡಬಿದಿರೆಯ ಬಡಗಮಿಜಾರು ಗ್ರಾಮದ ಅರೆಮಜಲು ಪಲ್ಕೆ ನಿವಾಸಿ ಚಂದಯ್ಯ ಗೌಡರ ಪುತ್ರ ಉಮೇಶ್ ಗೌಡ(35) ಎಂದು ಹೇಳಲಾಗಿದೆ.
ಮಂಗಳವಾರ ಮಧ್ಯರಾತ್ರಿಯಲ್ಲಿ ಯಾರೋ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಯುವಕನನ್ನು ಕಡಿದು ಹತ್ಯೆಗೈದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಮೂಡಬಿದ್ರೆ ಪೊಲೀಸರು ಬೇಟಿ ನೀಡಿ ತನಿಖೆ ನಡೆಸಲಾಗುತ್ತಿದೆ.