ಮಂಗಳೂರು, ಸೆ 03 (DaijiworldNews/PY): ಮಂಗಳೂರು ಆದಾಯ ತೆರಿಗೆ ಆಡಳಿತದ ಪ್ರಧಾನ ಆಯುಕ್ತ ಕಚೇರಿಯನ್ನು ಗೋವಾದ ಪಂಜಿಮ್ ಆದಾಯ ತೆರಿಗೆ ಆಡಳಿತದ ಪ್ರಧಾನ ಆಯುಕ್ತ ಕಚೇರಿಯೊಂದಿಗೆ ವಿಲೀನಗೊಳಿಸುವ ನಿರ್ಧಾರದ ವಿರುದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ವಿಲೀನಗೊಳ್ಳದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಈ ಹಿಂದೆ ಆ.28ರಂದು ಈ ಬಗ್ಗೆ ಉಡುಪಿ ಇನ್ ಕಾರ್ಪೋರೇಟೆಡ್ ಎರಡು ಪತ್ರಗಳನ್ನು ಸಚಿವಾಲಯಕ್ಕೆ ಕಳುಹಿಸಿದೆ. ಈ ಪತ್ರದಲ್ಲಿ ಉಲ್ಲೇಖಿಸಿರುವ ಅಂಶವನ್ನು ಪರಿಗಣಿಸುವಂತೆ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.
ಪತ್ರದಲ್ಲಿ ಉಲ್ಲೇಖಿಸಿರುವಂತೆ ಎರಡು ಆದಾಯ ತೆರಿಗೆಯ ಆಡಳಿತ ಕಚೇರಿಯನ್ನು ವಿಲೀನಗೊಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಮಾಡಿದ್ದಾರೆ.