ಮಂಗಳೂರು, ಸೆ. 03 (DaijiworldNews/SM): ಮಂಗಳೂರು ವಿದ್ಯುತ್ ಸರಬರಾಜು ನಿಗಮ(ಮೆಸ್ಕಾಂ) ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಯಾದ ಅವರ ಸ್ಥಾನಕ್ಕೆ ನೂತನ ಆಡಳಿತ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ತೆರವಾಗಿರುವ ಸ್ಥಾನಕ್ಕೆ ನೂತನ ನಿರ್ದೇಶಕರಾಗಿ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ನೇಮಕ ಮಾಡಲಾಗಿದೆ. ಪ್ರಶಾಂತ್ ಮಿಶ್ರಾ, 2014ರಲ್ಲಿ ಐಎಎಸ್ ಉತ್ತೀರ್ಣರಾಗಿದ್ದರು. ಈ ಹಿಂದಿನ ನಿರ್ದೇಶಕಿ ಸ್ನೇಹಲ್ ಆರ್. ಅವರನ್ನು ಬೆಂಗಳೂರು ಪಿಯು ಶಿಕ್ಷಣ ನಿರ್ದೇಶಕರಾಗಿ ನೇಮಕ ಮಾಡಿ ಸರಕಾರ ಆದೇಶ ನೀಡಿದೆ. ಸ್ನೇಹಲ್, 2013ನೇ ಐಎಎಸ್ ಬ್ಯಾಚ್ ನವರಾಗಿದ್ದಾರೆ.
ಸ್ನೇಹಲ್ ಅವರು ನಿರ್ದೇಶಕಿಯಾಗಿದ್ದ ಅವದಿಯಲ್ಲಿ ಲಾಕ್ ಡೌನ್ ಸಂದರ್ಭ ಮಂಗಳೂರಿನಲ್ಲಿ ವಿದ್ಯುತ್ ಬಿಲ್ ಸಮಸ್ಯೆ ತಲೆದೋರಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ಶಕ್ತರಾಗಿದ್ದರು.