ಕಾಸರಗೋಡು, ಸೆ. 04 (DaijiworldNews/MB) : ಜ್ಯುವೆಲ್ಲರಿಗೆ ಠೇವಣಿ ಹೂಡಿ ವಂಚಿಸಿದ ಬಗ್ಗೆ ಮಂಜೇಶ್ವರ ಶಾಸಕ ಎಂ . ಸಿ ಖಮರುದ್ದೀನ್ ವಿರುದ್ಧ ಮತ್ತಷ್ಟು ದೂರುಗಳು ಪೊಲೀಸರಿಗೆ ಲಭಿಸಿದೆ.

ಚೆರ್ವತ್ತೂರಿನ ಫ್ಯಾಷನ್ ಗೋಲ್ಡ್ ಜ್ಯುಲ್ಲರಿಗೆ ಠೇವಣಿ ಇರಿಸಿದ್ದ ಗ್ರಾಹಕರು ದೂರು ನೀಡಿದ್ದು, ಮುಟ್ಟ ವೆಂಗರದ ಅಬ್ದುಲ್ ರಹಮಾನ್ 15 ಲಕ್ಷ ರೂ ., ಕೊಡಕ್ಕಾಡ್ನ ಕೆ .ಎಂ ಮುಹಮ್ಮದ್, ಖದೀಜಾ 10 ಲಕ್ಷ ರೂ., ಕೆ. ಸಿ ಅಬ್ದುಲ್ ರಜಾಕ್ 10 ಲಕ್ಷ ರೂ. ನೀಡಿದ್ದು, ಮರಳಿಸದೆ ವಂಚಿಸಿರುವುದಾಗಿ ದೂರು ನೀಡಲಾಗಿದೆ.
ಎಂ. ಸಿ ಖಮರುದ್ದೀನ್ ಅಲ್ಲದೆ ಮೆನೇಜಿಂಗ್ ಡೈರಕ್ಟರ್ ಟಿ. ಕೆ ಪೂಕೋಯ ತಂಘಳ್ ವಿರುದ್ದವೂ ಕೇಸು ನೀಡಲಾಗಿದೆ. ಈ ಹಿಂದೆ ಕೊಡಕ್ಕಾಡ್ ನ ಅಬ್ದುಲ್ ಶುಕೂರ್, ಎಂ . ಟಿ .ಪಿ ಝುಹರಾ, ವಳಿಯಪರಂಬದ ಇ. ಕೆ ಆರಿಫ್ ದೂರು ನೀಡಿದ್ದರು. 36 ಲಕ್ಷ ರೂ. ಠೇವಣಿ ಮರಳಿಸಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಫ್ಯಾಷನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ 800 ರಷ್ಟು ಹೂಡಿಕೆದಾರರಿದ್ದು, ಚೆರ್ವತ್ತೂರು, ಕಾಸರಗೋಡು ಹಾಗೂ ಪಯ್ಯನ್ನೂರಿನಲ್ಲಿರುವ ಶಾಖೆಗಳು ಜನವರಿಯಲ್ಲಿ ಮುಚ್ಚಲಾಗಿತ್ತು. 2019 ರ ಆಗಸ್ಟ್ ತನಕ ಠೇವಣಿದಾರರಿಗೆ ಲಾಭದ ಅಂಶ ಲಭಿಸಿತ್ತು. ಬಳಿಕದ ದಿನಗಳಲ್ಲಿ ಲಾಭದ ಅಂಶ ಮಾತ್ರವಲ್ಲ ಠೇವಣಿ ಇರಿಸಿದ್ದ ಹಣವನ್ನು ಮರಳಿಸದಿರುವುದರಿಂದ ಗ್ರಾಹಕರು ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. 150 ಕೋಟಿ ರೂ. ಗಳಷ್ಟು ಠೇವಣಿ ಈ ಮೂರು ಶಾಖೆಗಳಲ್ಲಿ ಪಡೆದಿದ್ದಾರೆ ಎನ್ನಲಾಗಿದೆ.