ಕಾಸರಗೋಡು, ಸೆ. 04 (DaijiworldNews/MB) : ಅಪಾರ್ಟ್ ಮೆಂಟ್ವೊಂದರಲ್ಲಿ ಬಚ್ಚಿಡಲಾಗಿದ್ದ ಸುಮಾರು 18. 5 ಕಿಲೋ ಗಾಂಜಾವನ್ನು ಕುಂಬಳೆ ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಸಯ್ಯಿದ್ ಜಾಬಿರ್ (32) ಎಂಬಾತನನ್ನು ಬಂಧಿಸಲಾಗಿದೆ.
ವರ್ಕಾಡಿ ಮೊರತ್ತಣೆಯ ಮನೆಯೊಂದರಲ್ಲಿ ಗಾಂಜಾ ಬಚ್ಚಿಡಲಾಗಿತ್ತು. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.