ಪುತ್ತೂರು, ಸೆ. 04 (DaijiworldNews/MB) : ಕರುಗಳನ್ನು ಹಿಂಸಾತ್ಮಾಕವಾಗಿ ಓಮ್ನಿ ವ್ಯಾನ್ನಲ್ಲಿ ಸಾಗಾಟ ಮಾಡುತ್ತಿದ್ದ ಸಂದರ್ಭ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನು ರಕ್ಷಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡು ನಿವಾಸಿಗಳಾದ ಶಿವಪ್ರಸಾದ್ ಭಟ್ ಕೆ (52) ಮತ್ತು ಚಂದ್ರನ್ ಟಿ (34) ಎಂದು ಗುರುತಿಸಲಾಗಿದೆ. ಬಂಧಿತರಿಂದ ಜಾನುವಾರು ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಪುತ್ತೂರು ನಗರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಕೇರಳ ನೋಂದಾಯಿತ ಓಮಿನಿ ಮಾರುತಿ ಕಾರನ್ನು ನರಿಮೊಗ್ರು ಗ್ರಾಮದ ಪುರುಷರಕಟ್ಟೆ ಎಂಬಲ್ಲಿ ಗುರುವಾರ ಸಂಜೆ 6.45 ರ ಸುಮಾರಿಗೆ ತಡೆದು ನಿಲ್ಲಿಸಿದ್ದು ಈ ಸಂದರ್ಭ ಕರುವನ್ನು ಕಟ್ಟಿ ಅಕ್ರಮವಾಗಿ ವಾಹನದಲ್ಲಿ ಸಾಗಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 8, 11 ಗೋಹತ್ಯೆ ನಿಷೇಧ ಕಾಯಿದೆ 1964 ಮತ್ತು ಕಲಂ:11(1)(ಡಿ) ಪ್ರಾಣಿಹಿಂಸೆ ನಿಷೇಧ ಕಾಯ್ದೆ 1960 ಮತ್ತು ಕಲಂ: 66 ಜೊತೆಗೆ 192(ಎ) ಐ.ಎಂ.ವಿ ಆಕ್ಟ್ ಪ್ರಕರಣ ದಾಖಲಿಸಲಾಗಿದೆ.